»   »  ರಮ್ಯಾರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ: ನಾಗಶೇಖರ್

ರಮ್ಯಾರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ: ನಾಗಶೇಖರ್

Subscribe to Filmibeat Kannada

'ಸಂಜು ವೆಡ್ಸ್ ಗೀತಾ' ಚಿತ್ರದಿಂದ ನಟಿ ರಮ್ಯಾ ಅವರನ್ನು ಕೈಬಿಡಲಾಗಿದೆ ಎಂಬ ಸುದ್ದಿಯನ್ನು ನಟ, ನಿರ್ದೇಶಕ ನಾಗಶೇಖರ್ ಅಲ್ಲಗಳೆದಿದ್ದಾರೆ. ನಾಯಕ ನಟ ಶ್ರೀನಗರ ಕಿಟ್ಟಿಯೊಂದಿಗೆ ಈ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ನಟಿಸಲಿದ್ದಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗೀತಾ ಪಾತ್ರಕ್ಕಾಗಿ ರಮ್ಯಾಗಿಂತಲೂ ಉತ್ತಮ ನಟಿ ಮತ್ತೊಬ್ಬರಿಲ್ಲ ಎಂಬುದು ನಾಗಶೇಖರ್ ಕೊಡುವ ವಿವರಣೆ. ಹಾಗೆಯೇ ರಮ್ಯಾ ಸಹಾ ಗೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ರಮ್ಯಾ ಪದೇ ಪದೇ ವಿವಾದಗಳಲ್ಲಿ ಸಿಲುಕುತ್ತಿರುವ ಕಾರಣ ನಾಗಶೇಖರ್ ತಮ್ಮ ಚಿತ್ರದಿಂದ ಅವರನ್ನು ಕೈಬಿಡಲಾಗಿದೆ ಎಂಬ ವದಂತಿಗಳು ಗಾಂಧಿನಗರದಲ್ಲಿ ಹಬ್ಬಿದ್ದವು.

ಈ ರೀತಿಯ ವದಂತಿಗಳನ್ನು ನಾಗಶೇಖರ್ ತೀವ್ರವಾಗಿ ಖಂಡಿಸಿದ್ದು ರಮ್ಯಾರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ''ಈ ಪಾತ್ರಕ್ಕೆ ರಮ್ಯಾ ಮಾತ್ರ ನ್ಯಾಯ ಒದಗಿಸಬಲ್ಲರು. ರಮ್ಯಾರನ್ನು ಗಮನದಲ್ಲಿಟ್ಟುಕೊಂಡೆ ಚಿತ್ರಕತೆಯನ್ನು ಹೆಣೆದಿದ್ದೇನೆ. ನಮ್ಮನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಾಲದಕ್ಕೆ ನನ್ನ ಚಿತ್ರದಲ್ಲಿನಟಿಸಲು ರಮ್ಯಾ ಅವರಿಗೂ ಇಷ್ಟ. ಇದಿಷ್ಟು ಸಾಕಲ್ಲವೆ ನಾವಿಬ್ಬರೂ ಒಟ್ಟಿಗೆ ಚಿತ್ರ ಮಾಡಲು'' ಎಂದು ನಾಗಶೇಖರ್ ವಿವರಣೆ ನೀಡಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada