»   »  'ಇನಿಯ' ಜತೆ ಮಲೇಶ್ಯಾಗೆ ಹಾರಿದ ಪೂಜಾಗಾಂಧಿ

'ಇನಿಯ' ಜತೆ ಮಲೇಶ್ಯಾಗೆ ಹಾರಿದ ಪೂಜಾಗಾಂಧಿ

Subscribe to Filmibeat Kannada
ಪ್ರವಾಸಿಗರ ಸ್ವರ್ಗ ಮಲೇಶ್ಯಾ. ರಮ್ಯ ತಾಣಗಳಿಂದ, ಸುಂದರ ದ್ವೀಪಗಳಿಂದ ತುಂಬಿಕೊಂಡಿರುವ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರು ಯಾರಿದ್ದಾರೆ? ಅದರಲ್ಲೂ ಚಿತ್ರೀಕರಣಕ್ಕಂತೂ ಹೇಳಿ ಮಾಡಿಸಿದ ಸ್ಥಳವೇ ಸರಿ. ಈ ಸುಂದರ ಪರಿಸರಕ್ಕೆ ನಮ್ಮ 'ಇನಿಯ" ಪಯಣ ಹೊರಟಿದೆ. ನೀರಿನಲ್ಲೇ ಎರಡು ಗಂಟೆ ಚಲಿಸಿದರೆ ಸಿಗುವ ಲಂಕಾವಿ ದ್ವೀಪ ಹಾಗೂ ಕೌಲಾಲಂಪುರಗಳಲ್ಲಿ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ನಡೆಯಲಿದೆ.

ಶೈಲೇಂದ್ರ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ 'ಇನಿಯ' ಚಿತ್ರಕ್ಕೆ ಈಗಾಗಲೇ ಸಕಲೇಶ ಪುರ, ಬೆಂಗಳೂರು, ಬಾಬಾಬುಡನ್ ಗಿರಿ ಹಾಗೂ ಚಿಕ್ಕಮಗಳೂರಿನ ಪರಿಸರಗಳಲ್ಲಿ 60 ದಿನಗಳ ಚಿತ್ರೀಕರಣ ಪೂರ್ಣವಾಗಿದೆ. ಎರಡು ಗೀತೆಗಳ ಚಿತ್ರೀಕರಣಕ್ಕಾಗಿ ನಾಯಕ ಬಾಲಾಜಿ, ನಾಯಕಿ ಪೂಜಾ ಗಾಂಧಿ ಸೇರಿದಂತೆ 20 ಸದಸ್ಯರ ತಂಡ ಮಲೇಶ್ಯಾಗೆ ಪ್ರಯಾಣ ಬೆಳೆಸಿದೆ.

ಶೈಲೇಂದ್ರ ಬಾಬು ಅವರು ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಮದುಸೂಧನ ರೆಡ್ಡಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಕಳೆದ ಸಾಲಿನ ಯಶಸ್ವಿ ಚಿತ್ರಗಳಲ್ಲೊಂದಾದ 'ಮುಸ್ಸಂಜೆ ಮಾತು' ಚಿತ್ರವನ್ನು ನಿರ್ದೇಶಿಸಿದ 'ಮುಸ್ಸಂಜೆ ಮಹೇಶ್ 'ಇನಿಯನಿ'ಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅದೇ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ವಿ.ಶ್ರೀಧರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಸುಂದರನಾಥ್ ಸುವರ್ಣ ಕ್ಯಾಮೆರಾ, ಕವಿರಾಜ್, ಶ್ರೀಧರ್ ಗೀತರಚನೆ, ಮೋಹನ್ ಸಂಕಲನ, ರವಿವರ್ಮರ ಸಾಹಸವಿದೆ. ಚಿತ್ರದ ತಾರಾಬಳಗದಲ್ಲಿ ಬಾಲಾಜಿ, ಪೂಜಾ ಗಾಂಧಿ, ಜೈಜಗದೀಶ್, ಊರ್ವಶಿ, ರೇಖಾ, ಜ್ಯೋತಿ, ನೀನಾಸಂ ಅಶ್ವತ್, ಹರೀಶ್ ರಾಯ್, ಲೋಕನಾಥ್, ಬಿ.ವಿ.ರಾಧ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇನಿಯಾ ಚಿತ್ರತಂಡದ ಮೇಲೆ ಪೊಲೀಸರಿಂದ ಹಲ್ಲೆ
ಮಂಜಿನ ಹನಿಗಾಗಿ ರವಿಚಂದ್ರನ್ ಬೆವರಿನಹನಿ
ರವಿಚಂದ್ರನ್ ಸಂತೋಷ ಕೂಟದಲ್ಲಿ ತಾರೆಗಳು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada