»   » ಜೂನ್ 24ಕ್ಕೆ ಪೋನಿ ಜೊತೆ ಪ್ರಕಾಶ್ ರೈ ನಿಶ್ಚಿತಾರ್ಥ

ಜೂನ್ 24ಕ್ಕೆ ಪೋನಿ ಜೊತೆ ಪ್ರಕಾಶ್ ರೈ ನಿಶ್ಚಿತಾರ್ಥ

Posted By:
Subscribe to Filmibeat Kannada

ಬಹುಭಾಷಾ ನಟ ಪ್ರಕಾಶ್ ರೈ ಶೀಘ್ರದಲ್ಲೆ ಮದುವೆಯಾಗಲಿದ್ದಾರೆ. ಖ್ಯಾತ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಅವರ ಕೈಹಿಡಿಯಲಿದ್ದಾರೆ ಪ್ರಕಾಶ್ ರೈ. ಜೂನ್ 24ರಂದು ಪ್ರಕಾಶ್ ರೈ ಹಾಗೂ ಪೋನಿ ವರ್ಮಾ ನಿಶ್ಚಿತಾರ್ಥ ಬೆಂಗಳೂರಿನಲ್ಲಿ ನಡೆಯಲಿದೆ. ಇಷ್ಟು ದಿನ ಪ್ರಕಾಶ್ ರೈ ಮದುವೆ ಬಗ್ಗೆ ಇದ್ದಂತಹ ಊಹಾಪೋಹಗಳಿಗೆ ಕಡೆಗೂ ತೆರೆಬಿದ್ದಂತಾಗಿದೆ.

ಪ್ರಕಾಶ್ ರೈ ನಿರ್ದೇಶನದ ಚೊಚ್ಚಲ ಚಿತ್ರ 'ನಾನು ನನ್ನ ಕನಸು' ಬಿಡುಗಡೆಯಾಗಿರುವ ಸಮಯದಲ್ಲೇ ಕಾಕತಾಳೀಯ ಎಂಬಂತೆ ಅವರ ಮದುವೆ ಸುದ್ದಿಯೂ ಹೊರಬಿದ್ದಿದೆ. ಇತ್ತೀಚೆಗೆ ಪ್ರಕಾಶ್ ರೈ ತಮ್ಮ ಮದುವೆ ಬಗ್ಗೆ ಪ್ರಸ್ತಾಪಿಸುತ್ತಾ, ಶೀಘ್ರದಲ್ಲೆ ತಿಳಿಸಲಿದ್ದೇನೆ ಎಂದಿದ್ದರು. ಆದರೆ ಇಷ್ಟು ಬೇಗನೆ ಎಂಬುದನ್ನು ಯಾರು ಊಹಿಸಿರಲಿಲ್ಲ.

ಈ ಹಿಂದೆ ಫೈರ್ ಬ್ರ್ಯಾಂಡ್ ಎಂದೇ ಖ್ಯಾತರಾಗಿರುವ ಪ್ರಜಾರಾಜ್ಯಂ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾರಾಣಿ ಅವರನ್ನು ಮದುವೆಯಾಗಿರುವ ಫೋಟೋಗಳು ಅಂತರ್ಜಾಲದಲ್ಲಿ ರಾರಾಜಿಸಿದ್ದವು. ಆದರೆ ಇದೆಲ್ಲಾ ಗಾಳಿಸುದ್ದಿ ಎಂಬುದು ಬಳಿಕ ಗೊತ್ತಾಗಿತ್ತು. ಪೋನಿ ವರ್ಮಾ ಜೊತೆಗಿನ ಮದುವೆ ಯಾವಾಗ ಎಂಬುದು ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ.

ಪ್ರಕಾಶ್ ರೈ ಈಗಾಗಲೆ ತಮ್ಮ ಮೊದಲ ಪತ್ನಿ ಲಲಿತಾ ಕುಮಾರಿ ಅವರಿಂದ ವಿವಾಹ ವಿಚ್ಛೇದನ ಪಡೆದಿದ್ದಾರೆ. ಕಳೆದೆರಡು ವರ್ಷಗಳಿಂದ ಬಾಲಿವುಡ್ ನ ಖ್ಯಾತ ನೃತ್ಯನಿರ್ದೇಶಕಿ ಪೋನಿ ವರ್ಮಾರನ್ನು ಪ್ರಕಾಶ್ ರೈ ಪ್ರೀತಿಸುತ್ತಿದ್ದರು. ಮೊದಲ ಪತ್ನಿಯೊಂದಿಗಿನ ದಾಂಪತ್ಯದಲ್ಲಿ ಬಿರುಕು ಮೂಡಲು ಇದು ಒಂದು ಕಾರಣ ಎನ್ನಲಾಗಿದೆ. ಬಾಲಿವುಡ್ ನ ಬಿಲ್ಲೂ, ನಮಸ್ತೆ ಲಂಡನ್, ಚುಪ್ ಚುಪ್ ಕೇ, ಗರಂ ಮಸಾಲಾ ಮತ್ತಿತರ ಚಿತ್ರಗಳಿಗೆ ಪೋನಿ ನೃತ್ಯ ನಿರ್ದೇಶನ ಮಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada