»   » ಅಭಿಮಾನಿಗಳ ಪಾಲಿನ ಆಲಯ ರಾಜ್ ಸ್ಮಾರಕ

ಅಭಿಮಾನಿಗಳ ಪಾಲಿನ ಆಲಯ ರಾಜ್ ಸ್ಮಾರಕ

Posted By:
Subscribe to Filmibeat Kannada

ಕಂಠೀರವ ಸ್ಟುಡಿಯೋ ಆವರಣದಲ್ಲಿ ನಿರ್ಮಾಣವಾಗುತ್ತಿರುವ ವರನಟ ಡಾ.ರಾಜ್ ಕುಮಾರ್ ಅವರ ಸ್ಮಾರಕ ನವೆಂಬರ್ 1ರಂದು ಉದ್ಘಾಟನೆಯಾಗಲಿದೆ. ರಾಜ್ ಸ್ಮಾರಕ ಅಭಿವೃದ್ಧಿ ಕೆಲಸ ತೃಪ್ತಿ ತಂದಿದೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

ಸರಕಾರವು ಸಂಪೂರ್ಣ ಸಹಕಾರ ನೀಡುತ್ತಿದ್ದು ರಾಜ್ ಸ್ಮಾರಕ ಆದಷ್ಟು ಬೇಗ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನು ಶಿವಣ್ಣ ವ್ಯಕ್ತಪಡಿಸಿದ್ದಾರೆ.ರಾಜ್ ಸ್ಮಾರಕವು ಪ್ರೇಕ್ಷಣೀಯ ಸ್ಥಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಭಿಮಾನಿ ದೇವರುಗಳ ಪಾಲಿಗೆ ಅದು ಆಲಯವಾಗಲಿದೆ ಎಂದು ಶಿವಣ್ಣ ಹೇಳಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರು ಸಲ್ಲಿಸಿದ ಸೇವೆ, ಅವರ ಚಿತ್ರಗಳು, ಅವರು ಹಾಡಿದ ಹಾಡುಗಳು, ಅವರ ಸಂಭಾಷಣೆಗಳು ಸ್ಮಾರಕದಲ್ಲಿ ಸ್ಥಾನಪಡೆಯಲಿವೆ. ಒಟ್ಟು 2.5 ಎಕರೆ ಪ್ರದೇಶದಲ್ಲಿ ವಸ್ತು ಸಂಗ್ರಹಾಲಯ, ಧ್ಯಾನ ಮಂದಿರ, ಬಯಲು ರಂಗಮಂದಿರ, ಉದ್ಯಾನವನ ಹಾಗೂ ಗ್ರಂಥಾಲಯ ನಿರ್ಮಾಣವಾಗಲಿದೆ. ಅಂದಾಜು ರು.10 ಕೋಟಿ ವೆಚ್ಚದಲ್ಲಿ ಅಣ್ಣಾವ್ರ ಸ್ಮಾರಕ ನಿರ್ಮಾಣವಾಗುತ್ತಿದೆ ಎಂದು ಶಿವಣ್ಣ ವಿವರ ನೀಡಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada