»   » ತುಂಟನಿಗೆ ಜೊತೆಯಾದ ತುಂಟಿ ಸದಾ

ತುಂಟನಿಗೆ ಜೊತೆಯಾದ ತುಂಟಿ ಸದಾ

Posted By:
Subscribe to Filmibeat Kannada

ನಟಿ ಸದಾ ಕನ್ನಡ ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕನ್ನಡದ ಪ್ರೇಕ್ಷಕರು ಇನ್ನೇನು ಸದಾ ಅವರನ್ನು ಮರೆತೇ ಬಿಟ್ಟರು ಎಂದುಕೊಂಡಾಗ 'ಮೈಲಾರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸುತ್ತಿರುವ 99ನೇ ಚಿತ್ರ ಮೈಲಾರಿ.

'ಮೈಲಾರಿ' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಏತನ್ಮಧ್ಯೆ ಸದಾ ಮತ್ತೊಂದು ಕನ್ನಡ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶಿಸಲಿರುವ 'ತುಂಟ ತುಂಟಿ' ಚಿತ್ರದ ಪಾತ್ರ ಸದಾ ಅವರಿಗೆ ಒಲಿದಿದೆ. ಸಮೀರ್ ದತ್ತಾನಿ ಅಲಿಯಾಸ್ ಧ್ಯಾನ್ ಚಿತ್ರದ ನಾಯಕ ನಟ.

'ತುಂಟ ತುಂಟಿ' ಚಿತ್ರದ ಮತ್ತೊಂದು ವಿಶೇಷವೆಂದರೆ, ಇಂದ್ರಜಿತ್ ಲಂಕೇಶ್ ಚಿತ್ರದಲ್ಲಿ ಧ್ಯಾನ್ ಮತ್ತು ಸದಾ ನಟಿಸುತ್ತಿರುವ ಎರಡನೇ ಚಿತ್ರ ಇದಾಗಿದೆ. ಈ ಹಿಂದೆ ಇದೇ ಜೋಡಿ 'ಮೋನಾಲಿಸಾ' ಚಿತ್ರದಲ್ಲಿ ಪಾರ್ಟ್ ಮಾಡಿದ್ದರು. 'ತುಂಟ ತುಂಟಿ' ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ರನ್ನು ಕರೆತರುವ ಪ್ರಯತ್ನವನ್ನು ಇಂದ್ರಜಿತ್ ಮಾಡಿದ್ದರು.

ಆದರೆ ಗಣೇಶ್ ಈ ಚಿತ್ರದ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ ಎನ್ನುತ್ತವೆ ಗಾಂಧಿನಗರದ ಮೂಲಗಳು. ಸಾಲದಕ್ಕೆ ಇಂದ್ರಜಿತ್ ಯಶಸ್ವಿ ನಿರ್ದೇಶಕ ಅಲ್ಲ ಎಂಬುದು ಗಣೇಶ್ ಗೂ ಗೊತ್ತಿರುವ ಸಂಗತಿ. ವಿಷಯ ಹೀಗಿದ್ದರೆ ತುಂಟ ತುಂಟಿಯನ್ನು ಗಣೇಶ್ ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂಬ ಮಾತುಗಳು ತೆರೆಯ ಹಿಂದೆ ಕೇಳಿಬಂದಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada