»   »  ಬ್ಯಾಂಕಾಕ್‌ನಲ್ಲಿ ಶರ್ಮಿಳಾ 'ಸ್ವಯಂವರ'!

ಬ್ಯಾಂಕಾಕ್‌ನಲ್ಲಿ ಶರ್ಮಿಳಾ 'ಸ್ವಯಂವರ'!

Subscribe to Filmibeat Kannada

ಭರತ ಖಂಡದಲ್ಲಿ ರಾಜಾಧಿರಾಜರು ಆಚರಿಸಿಕೊಂಡು ಬಂದಿರುವ 'ಸ್ವಯಂವರ' ಪದ್ಧತಿ ಬ್ಯಾಂಕಾಕ್‌ನಲ್ಲೂ ಬಳಕೆಯಲ್ಲಿದೆಯೇ? ಇಲ್ಲ. ಆದರೂ ಬ್ಯಾಂಕಾಕ್‌ನಲ್ಲಿ ಈಗ "ಸ್ವಯಂವರ" ನಡೆಯುತ್ತಿದೆ. ಆದರೆ ಇದು ಯಾವ ರಾಜರ ಸ್ವಯಂವರವೂ ಅಲ್ಲ. ಶ್ರೀಸಾಯಿ ಕಂಬೈನ್ಸ್ ಲಾಂಛನದಲ್ಲಿ ಎಂ.ಚಂದ್ರು ನಿರ್ಮಿಸುತ್ತಿರುವ 'ಸ್ವಯಂವರ' ಚಿತ್ರದ ಹಾಡುಗಳು ಈ ಸುಂದರ ದೇಶದಲ್ಲಿ ಚಿತ್ರೀಕರಣಗೊಳುತ್ತಿದೆ.

ಬೆಂಗಳೂರು ಹಾಗೂ ಮೈಸೂರಿನಲ್ಲಿ 25ದಿನಗಳ ಅವಧಿಯಲ್ಲಿ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರಕ್ಕೆ ಈಗ ಬ್ಯಾಂಕಾಕ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.ಅನಂತರಾಜು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನವಿದೆ.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಪ್ರೇಂ, ಯೋಗರಾಜ್‌ಭಟ್, ವಿ.ನಾಗೇಂದ್ರಪ್ರಸಾದ್. ತುಷಾರ ರಂಗನಾಥ್ ಹಾಗೂ ಎ.ಪಿ.ಅರ್ಜುನ್ ಅವರ ಗೀತರಚನೆಯಿರುವ 'ಸ್ವಯಂವರ'ಕ್ಕೆ ನಿರ್ದೆಶಕರೇ ಚಿತ್ರಕಥೆ ಬರೆದಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ತುಷಾರರಂಗನಾಥ್ ಸಂಬಾಷಣೆ, ಹರ್ಷ ನೃತ್ಯ ಹಾಗೂ ಪಳನಿರಾಜ್ ಅವರ ಸಾಹಸ ಸಂಯೋಜನೆಯಿರುವ ಚಿತ್ರದ ತಾರಾಬಳಗದಲ್ಲಿ ಶ್ರೀನಗರ ಕಿಟ್ಟಿ, ದಿಗಂತ್, ಶರ್ಮಿಳಾ ಮಾಂಡ್ರೆ, ತಾರಾ, ಓಂಪ್ರಕಾಶ್‌ರಾವ್, ಅರುಣ್‌ಸಾಗರ್ ಮುಂತಾದವರಿದ್ದಾರೆ

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada