»   » ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ 'ಲಕ್ಷ್ಮಿ' ಕೃಪಾಕಟಾಕ್ಷ

ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ 'ಲಕ್ಷ್ಮಿ' ಕೃಪಾಕಟಾಕ್ಷ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈಗ ಬಿಜಿಯೋ ಬಿಜಿ. ಅವರ ಸಾಕಷ್ಟು ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ. ಅವುಗಳಲ್ಲಿ ಮುಖ್ಯವಾಗಿ ರಾಘವ ಲೋಕಿ ನಿರ್ದೇಶನದ 'ಲಕ್ಷ್ಮಿ' ಚಿತ್ರವೂ ಒಂದು. ಫೆ.10ರಿಂದ ಅಂತಿಮ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಮಾರ್ಚ್ ಮೊದಲ ವಾರದಲ್ಲಿ ಪೂರ್ಣವಾಗಲಿದೆ.

ಏತನ್ಮಧ್ಯೆ ಶಿವಣ್ಣ ಶಬರಿಮಲೆಗೆ ಹೊರಟಿದ್ದಾರೆ. ಫೆ.20ಕ್ಕೆ ಅವರು ಚಿತ್ರೀಕರಣಕ್ಕೆ ಹಿಂತಿರುಗಲಿದ್ದಾರೆ. ಇತ್ತೀಚೆಗೆ ಭಾರಿ ಸಾಹಸ ಸನ್ನಿವೇಶವೊಂದನ್ನು ಚಿತ್ರೀಕರಿಸಿಕೊಳ್ಳಲಾಯಿತು. ಶಿವಣ್ಣ ಸೇರಿದಂತೆ ಪ್ರಿಯಾಮಣಿ, ಆಶಿಷ್ ವಿದ್ಯಾರ್ಥಿ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಗೋವಾದಲ್ಲಿ ಹಾಡು ಹಾಗೂ ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಬೇಕಾಗಿದೆ. ಚಂದ್ರಶೇಖರ್ ಛಾಯಾಗ್ರಹಣ, ಗುರುಕಿರಣ್ ಸಂಗೀತ 'ಲಕ್ಷ್ಮಿ' ಚಿತ್ರಕ್ಕಿದೆ. ಅಂದಹಾಗೆ ಓಂ ಪ್ರಕಾಶ್ ರಾವ್ ನಿರ್ದೆಶನದಲ್ಲಿ ಮೂಡಿಬರುತ್ತಿರುವ ಶಿವಣ್ಣನ 101ನೇ 'ಶಿವ'. ಈ ಚಿತ್ರವೂ ಅಂತಿಮ ಹಂತದ ಚಿತ್ರೀಕರಣ ಮುಗಿಸಿಕೊಂಡಿದೆ. ಇದಾದ ಬಳಿಕ 'ಅಂದರ್ ಬಾಹರ್'ಗೆ ಕೈಹಾಕಿದ್ದಾರೆ. (ಏಜೆನ್ಸೀಸ್)

English summary
The final schedule of Shivarajkumar starrer Lakshmi directed by Raghava Loki completed by shot a big fight sequence. Shivarajkumar, Priyamani, Ashish Vidyarthi will be participating in this round of shooting for Lakshmi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada