»   »  ಮೆಲ್ಲಮೆಲ್ಲಗೆ ತೆಳ್ಳಗಾದ ವಿಜಯ ರಾಘವೇಂದ್ರ

ಮೆಲ್ಲಮೆಲ್ಲಗೆ ತೆಳ್ಳಗಾದ ವಿಜಯ ರಾಘವೇಂದ್ರ

Posted By:
Subscribe to Filmibeat Kannada

ನಟ ವಿಜಯ ರಾಘವೇಂದ್ರ ಇಪ್ಪತ್ತು ಕೆ.ಜಿಯಷ್ಟು ತೂಕ ಇಳಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 300ರಲ್ಲಿನ ಪಾತ್ರವನ್ನು ಪೋಷಿಸಲು ಅವರು ಹೀಗೆ ಮಾಡಬೇಕಾಯಿತಂತೆ. ಹಾಗೆಯೇ ಇದೇ ಚಿತ್ರದ್ಕ್ಕ್ಕಾಗಿ ಅವರ ಕೇಶ ವಿನ್ಯಾಸ ಸಹ ಬದಲಾಗಿದೆ.

ಈ ಬಗ್ಗೆ ಮಾತನಾಡಿದ ವಿಜಯ ರಾಘವೇಂದ್ರ, ಈ ಚಿತ್ರದಲ್ಲಿ ನನ್ನದು ವಕೀಲನ ಪಾತ್ರ. ಇದೇ ಮೊದಲ ಬಾರಿ ನಾನು ವಕೀಲನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಪಾತ್ರಕ್ಕೆ ಹಲವಾರು ಆಯಾಮಗಳಿದ್ದು ತೆಳ್ಳಗೆ ಇರಬೇಕಾದ ಕಾರಣ ಇಪ್ಪತ್ತು ಕೆಜಿಯಷ್ಟು ತೂಕವನ್ನು ಇಳಿಸಿಕೊಂಡಿದ್ದೇನೆ. ಇದಕ್ಕಾಗಿ ಮೂರು ತಿಂಗಳು ಕಷ್ಟಪಟ್ಟಿದ್ದಾಗಿ ಅವರು ತಿಳಿಸಿದ್ದಾರೆ.

ಹಾಗೆಯೇ ತೆಳ್ಳಗೆ ಕಾಣಲು ನಟರಾದ ಸುದೀಪ್, ಗಣೇಶ್ ಮತ್ತು ತರುಣ್ ಸಹ ತೂಕ ಇಳಿಸಿಕೊಂಡಿದ್ದಾರೆ. ಇದೀಗ ಆ ಪಟ್ಟಿ ವಿಜಯ ರಾಘವೇಂದ್ರ ಹೊಸದಾಗಿ ಸೇರ್ಪಡೆಯಾಗಿದ್ದಾರೆ ಅಷ್ಟೆ. ಚಿತ್ರದಲ್ಲಿ ವಿಜಿ ಜತೆಗೆ ಪ್ರಿಯಾಂಕ, ದೇವರಾಜ್, ಸುಮನ್ ರಂಗನಾಥ್, ಸೃಜನ್ ಲೋಕೇಶ್, ಶಂಕರ್, ಮುನಿ, ರವೀಂದ್ರನಾಥ್ ಸಹ ಅಭಿನಯಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada