ಕ್ಯಾನ್ಸರ್‌ಗೆ ಬಲಿಯಾದ ಖ್ಯಾತ ಖಳ ನಟ ರಾಮಿ ರೆಡ್ಡಿ

ಕನ್ನಡದ ಅಭಿಮನ್ಯು ಸೇರಿದಂತೆ ಪ್ರಭಾಕರ್ ಹಾಗೂ ಶಶಿಕುಮಾರ್ ಅವರ ಚಿತ್ರಗಳಲ್ಲಿ ಖಳನಟನಾಗಿ ರಾಮಿ ರೆಡ್ಡಿ ಅಭಿನಯಿಸಿದ್ದರು. ಕನ್ನಡ ವಜ್ರಮುನಿ ಅವರಷ್ಟೇ ತೆಲುಗಿನಲ್ಲಿ ರಾಮಿರೆಡ್ಡಿ ತಮ್ಮ ವಿಭಿನ್ನ ನಟನೆಗೆ ಹೆಸರಾಗಿದ್ದರು. ಅವರ ಬಕ್ಕ ತಲೆ, ಕಣ್ಣಿನ ನೋಟ ಖಳನಟನೆಗೆ ಹೇಳಿ ಮಾಡಿಸಿದಂತಿತ್ತು. ಸರಿಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಮಿ ರೆಡ್ಡಿ ಅಭಿನಯಿಸಿದ್ದಾರೆ.
ತೆಲುಗಿನ 'ಅಂಕುಶಂ' ಚಿತ್ರ ರಾಮಿರೆಡ್ಡಿ ಅವರಿಗೆ ಅಪಾರ ಹೆಸರು ತಂದುಕೊಟ್ಟಿತ್ತು. ಕಿಡ್ನಿ ವೈಫಲ್ಯ ಹಾಗೂ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಂದ ರಾಮಿ ರೆಡ್ಡಿ ಬಳಲುತ್ತಿದ್ದರು. ಅವರ ಹಠಾತ್ ನಿಧನಕ್ಕೆ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ. ತೆರೆಯ ಮೇಲೆ ಗಂಭೀರ, ಭಯಾನಕವಾಗಿ ಕಾಣುವ ರಾಮಿ ರೆಡ್ಡಿ ವೈಯಕ್ತಿಕವಾಗಿ ತೀರಾ ಸಂಕೋಚದ, ಸೂಕ್ಷ್ಮ ಮನಸ್ಸಿನ ವ್ಯಕ್ತಿಯಾಗಿದ್ದರು.
ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ರಾಮಿ ರೆಡ್ಡಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು. ಉರ್ದು ಮತ್ತು ಹಿಂದಿ ಪತ್ರಿಕೆಗಳಿಗೆ ಬರೆಯುತ್ತಿದ್ದರು. ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವೀಧರರಾಗಿದ್ದರು. ರಾಮಿ ರೆಡ್ಡಿ ಅವರ ತೆಲಂಗಾಣ ಶೈಲಿಯ ಲಾಕ್ಷಣಿಕ ಡೈಲಾಗ್‌ಗಳು ಬಹಳ ಜನಪ್ರಿಯವಾಗಿದ್ದವು.


Click it and Unblock the Notifications











