»   »  ತಮಿಳು ಚಿತ್ರರಂಗಕ್ಕೆ ವಿಶಾಲ್ ಹೆಗಡೆ ಪಲಾಯನ

ತಮಿಳು ಚಿತ್ರರಂಗಕ್ಕೆ ವಿಶಾಲ್ ಹೆಗಡೆ ಪಲಾಯನ

Posted By:
Subscribe to Filmibeat Kannada
Vishal Hegde
'ನಿನಗಾಗಿ' ಸೇರಿದಂತೆ ಹತ್ತಕ್ಕೂ ಹೆಚ್ಚು ಕನ್ನಡಚಿತ್ರಗಳಲ್ಲಿ ನಟಿಸಿದ್ದ ವಿಶಾಲ್ ಹೆಗಡೆ ತಮಿಳು ಚಿತ್ರರಂಗಕ್ಕೆ ಹಾರಿದ್ದಾರೆ. ಕಳೆದ ಎಂಟು ವರ್ಷಗಳಿಂದ ಅವರು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದರು. ತಮಿಳು ಚಿತ್ರವೊಂದಕ್ಕೆ ಸಹಿ ಹಾಕುವ ಮೂಲಕ ಅವರು ಕೋಲಿವುಡ್ ಗೆ ಪ್ರವೇಶ ಪಡೆದಿದ್ದಾರೆ.

ಸಿಬಿರಾಜ್ ನಿರ್ಮಿಸುತ್ತಿರುವ 'ಕಳ್ಳ ಕಾದಲನ್'ಚಿತ್ರದಲ್ಲಿ ಅವರು ನಟಿಸಲಿದ್ದು ನಾಯಕಿಯಾಗಿ ಪ್ರಿಯಾಂಕ ಶಾ ಎಂಬ ಹೊಸಬರನ್ನು ಆಯ್ಕೆ ಮಾಡಲಾಗಿದೆ. ತಮಿಳು ಚಿತ್ರಗಳ ಹುಚ್ಚು ಅಭಿಮಾನಿ ನಾನು ಎನ್ನುವ ವಿಶಾಲ್ ಹೆಗಡೆ ಕಡೆಗೂ ಅಲ್ಲಿಯೇ ನೆಲೆಕಂಡುಕೊಳ್ಳಲು ಹೊರಟಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಅವಕಾಶಗಳು ವಿಶಾಲ್ ರನ್ನು ಹುಡುಕಿಕೊಂಡು ಬರಲಿಲ್ಲ ಎಂಬ ಆಪಾದನೆಯೂ ಇದೆ.

ಅಂದಹಾಗೆ ಕಳ್ಳ ಕಾದಲನ್ ಚಿತ್ರಕ್ಕೆ ಆರ್ ಪಿ ಪಟ್ನಾಯಕ್ ಸಂಗೀತ ಸಂಯೋಜನೆ ಇದೆ.ಪ್ಲೇ ಬಾಯ್ ಪಾತ್ರದಲ್ಲಿ ಶಿಬಿರಾಜ್ ಸಹ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. ರಮ್ಯಾ, ಭಾವನಾ ರಾವ್ ನಂತರ ಈಗ ತಮಿಳು ಚಿತ್ರರಂಗಕ್ಕೆ ವಿಶಾಲ್ ಹೆಗಡೆ ಪಲಾಯನ ಮಾಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ತಮಿಳು ಚಿತ್ರರಂಗೆಕ್ಕೆ ಭಾವನಾ ರಾವ್ ವಲಸೆ!
ಕನ್ನಡದಭಾವನಾ ರಾವ್ ತಮಿಳಿನ ಶಿಕ್ಷಾ ಆದ ಕತೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada