»   »  ನಿರ್ದೇಶಕನಾಗಿ ಪ್ರಮೋದ್ ಚಕ್ರವರ್ತಿ ಆಗಮನ

ನಿರ್ದೇಶಕನಾಗಿ ಪ್ರಮೋದ್ ಚಕ್ರವರ್ತಿ ಆಗಮನ

Subscribe to Filmibeat Kannada
Pramod Chakravarthy
ಬಹಳ ಸುದೀರ್ಘ ದಿನಗಳ ನಂತರ ಕನ್ನಡ ನಟ ಪ್ರಮೋದ್ ಚಕ್ರವರ್ತಿ ಹಿಂತಿರುಗಿದ್ದಾರೆ. ಪ್ರಮೋದ್ ಚಕ್ರವರ್ತಿ ಈ ಹಿಂದೆ ಜೀ ಬೂಂಬಾ, ಓಳು ಸಾರ್ ಬರಿ ಓಳು ಮತ್ತು ಅಕ್ಕ ಚಿತ್ರಗಳಲ್ಲಿ ನಟಿಸಿದ್ದರು. ನಂತರ ಹೇಳಹೆಸರಿಲ್ಲದಂತೆ ನಾಪತ್ತೆಯಾಗಿದ್ದರು.

ಈಗ ನಿರ್ದೇಶಕನಾಗಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ. ಅವರು ಕೈಗೆತ್ತಿಕೊಂಡಿರುವ ಚಿತ್ರದ ಹೆಸರು 'ಗೋಲ್ ಮಾಲ್'. ಮೇ 12ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿದೆ. ಈ ಚಿತ್ರವನ್ನು ಅಣಜಿ ನಾಗರಾಜ್ ನಿರ್ಮಿಸುತ್ತಿದ್ದಾರೆ. ವಿಜಯ ರಾಘವೇಂದ್ರ ಮತ್ತು ಶುಭಾ ಪೂಂಜಾ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಚಿತ್ರ. ಕತೆ, ಚಿತ್ರಕತೆ ಸಹ ಪ್ರಮೋದ್ ಅವರೇ ಬರೆದಿದ್ದಾರೆ.

ತಾವು ನಿರ್ದೇಶಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು. ಇದೊಂದು ಸಂಪೂರ್ಣ ಹಾಸ್ಯಪ್ರಧಾನ ಚಿತ್ರ. ಚಿತ್ರ ಎಲ್ಲೂ ನಿಮ್ಮನ್ನು ಬೋರು ಹೊಡೆಸುವುದಿಲ್ಲ ಎಂಬ ಭರವಸೆ ಕೊಡುತ್ತಾರೆ ಪ್ರಮೋದ್. ಚಿತ್ರದಲ್ಲಿನ ನಾಯಕ ಮತ್ತು ನಾಯಕಿ ಪಾತ್ರಗಳು ಸಹ ಹಾಸ್ಯಮಯವಾಗಿರುತ್ತವೆ. ಚಿತ್ರದಲ್ಲಿನ ಪಾತ್ರಗಳು ಎಲ್ಲೂ ನಗುವುದಿಲ್ಲ. ಆದರೆ ಪ್ರೇಕ್ಷಕ ಮಾತ್ರ ಬಿದ್ದು ಬಿದ್ದು ನಗುತ್ತಾನೆ ಎನ್ನುತ್ತಾರೆ ಪ್ರಮೋದ್ ಚಕ್ರವರ್ತಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಹೊಡಿಮಗ ಅಸಭ್ಯ ದೃಶ್ಯಗಳ ಬಗ್ಗೆ ಶಿವಣ್ಣ ಪಶ್ಚಾತ್ತಾಪ
ತೆಲುಗು ಮೋಹಕ ತಾರೆ ಇಲಿಯಾನಾ ಕನ್ನಡಕ್ಕೆ?
ಬಾಲಿವುಡ್ ನಾಯಕಿಯರಿಗೆ ಕಿಮ್ಮತ್ತಿಲ್ಲ: ಬಿಪಶಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada