»   »  ಕನ್ನಡದಲ್ಲಿ ಮತ್ತೆ 'ರಮ್ಯಾ 'ಚೈತ್ರಕಾಲ ಆರಂಭ!

ಕನ್ನಡದಲ್ಲಿ ಮತ್ತೆ 'ರಮ್ಯಾ 'ಚೈತ್ರಕಾಲ ಆರಂಭ!

Posted By:
Subscribe to Filmibeat Kannada
Actress Ramya back in news
ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವುದು ನಟಿ ರಮ್ಯಾ ಅವರ ವಿಶೇಷಗಳಲ್ಲಿ ಒಂದು. ಕನ್ನಡದಲ್ಲಿ ಅವಕಾಶಗಳು ಹೆಚ್ಚುತ್ತಿರುವ ಕಾರಣಕ್ಕೆ ಈ ಬಾರಿ ಅವರು ಸುದ್ದಿಯಾಗಿದ್ದಾರೆ. ಅವರು ನಟಿಸಿರುವ 'ಜೊತೆಗಾರ' ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅತ್ಯಂತ ಕ್ಷಿಪ್ರವಾಗಿ ರಮ್ಯಾ ಸಹ ಕನ್ನಡ ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ.

ಪ್ರಸ್ತುತ ರಮ್ಯಾ ಕೈಯಲ್ಲಿ ಎರಡು ಚಿತ್ರಗಳಿವೆ. ಈ ಎರಡು ಚಿತ್ರಗಳ ನಾಯಕ ಕಿಚ್ಚ ಸುದೀಪ್ ಎಂಬುದು ವಿಶೇಷ. ಒಂದರ ನಂತರ ಮತ್ತೊಂದು ಚಿತ್ರ ಸೆಟ್ಟೇರಲಿದೆ. ಕನ್ನಡ ಚಿತ್ರೋದ್ಯಮದಲ್ಲಿ ಈ ಎರಡು ಚಿತ್ರಗಳು ಬಹಳಷ್ಟು ಕುತೂಹಲ ಉಂಟುಮಾಡಿವೆ. ಶಂಕರ್ ಮತ್ತು ಕೆ ಮಂಜು ಈ ಎರಡು ಚಿತ್ರಗಳ ನಿರ್ಮಾಪಕರು.

ಶಂಕರ್ ನಿರ್ಮಿಸುತ್ತಿರುವ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ಹಾಡುಗಳ ಚಿತ್ರೀಕರಣ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ರಮ್ಯಾ ಉದ್ದ ಜಡೆಯಲ್ಲಿ ಕಾಣಿಸಲಿದ್ದಾರೆ. ಪಾತ್ರಕ್ಕೆ ತಕ್ಕಂತೆ ನನ್ನ ಕೇಶ ವಿನ್ಯಾಸವನ್ನು ಬದಲಾಯಿಸಿಕೊಂಡಿದ್ದೇನೆ. ಈ ಚಿತ್ರದಲ್ಲಿ ತಮ್ಮದು ಆತ್ಮವಿಶ್ವಾಸ ತುಂಬಿ ತುಳುಕುವ ಪಾತ್ರ ಎನ್ನುತ್ತಾರೆ ರಮ್ಯಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಹೊಡಿಮಗ ಅಸಭ್ಯ ದೃಶ್ಯಗಳ ಬಗ್ಗೆ ಶಿವಣ್ಣ ಪಶ್ಚಾತ್ತಾಪ
ತೆಲುಗು ಮೋಹಕ ತಾರೆ ಇಲಿಯಾನಾ ಕನ್ನಡಕ್ಕೆ?
'ಜೊತೆಗಾರ' ಪ್ರೇಮ್ ಜೊತೆಗಾತಿ ರಮ್ಯಾ ನಾಪತ್ತೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada