twitter
    For Quick Alerts
    ALLOW NOTIFICATIONS  
    For Daily Alerts

    ನಟಿ ರಮ್ಯಾಗೆ ಕನ್ನಡ ಮಾತಾಡೋದಂದ್ರೆ ಅಲರ್ಜಿನಾ?

    By * ಬಾಲರಾಜ್ ತಂತ್ರಿ
    |

    ನಮ್ಮ ಕನ್ನಡ ನಟಿಯರು ಯಾಕೆ ಹೀಗೆ? ಮಾತಿಗೆ ಮುಂಚೆ ಇಂಗ್ಲಿಷ್‌ನಲ್ಲಿ ಮಾತಾಡುವ ಇವರಿಗೆ ಕನ್ನಡದ ಬಗ್ಗೆ ಅಲರ್ಜಿನಾ ಅಥವಾ ಬ್ರಿಟಿಷರು ಬಿಟ್ಟು ಹೋದ ಭಾಷೆಯ ಮೇಲಿನ ಪ್ರೀತಿಯೋ ತಿಳಿಯದಾಗಿದೆ ತಾಯಿ ಭುವನೇಶ್ವರಿ?

    ಕೆಲ ದಿನಗಳ ಹಿಂದೆ ಅಂದರೆ ಕನ್ನಡ ಚಿತ್ರರಂಗದ ಮಟ್ಟಿಗೆ ಕಪ್ಪುಚುಕ್ಕೆಯಾದ ದರ್ಶನ್ ಪ್ರಕರಣ, ನಂತರ ನಟಿ ನಿಖಿತಾಳನ್ನು ಚಿತ್ರರಂಗದಿಂದ ಬಹಿಷ್ಕರಿಸಿದ ಘಟನೆಯ ನಂತರ ಖಾಸಾಗಿ ಟಿವಿ ವಾಹಿನಿಯೊಂದು ರಮ್ಯಾ ಸಂದರ್ಶನ ನಡೆಸಿತ್ತು. ನಂಬಿದ್ರೆ ನಂಬಿ, ಬಿಟ್ರೆ ಬಿಡಿ ಒಂದು ಗಂಟೆಯ ಸಂದರ್ಶನದಲ್ಲಿ ರಮ್ಯ ಕೆಲವೇ ಕೆಲವು ಕನ್ನಡ ಪದಗಳನ್ನು ಬಳಸಿದ್ದನ್ನು ಬಿಟ್ಟರೆ ಮಿಕ್ಕಿದ್ದೆಲ್ಲಾ ಇಂಗ್ಲಿಷ್‌ಮಯ.

    ಅಲ್ಲಾ.. ಈ ನಟಿಯರೆಗೆಲ್ಲಾ ನಮ್ಮ ಮಾತೃಭಾಷೆಯ ಮೇಲೆ ಸ್ವಲ್ಪನಾದ್ರೂ ಗೌರವ ಬೇಡ್ವಾ? ಅಥವಾ ತಾನೂ ಚೆನ್ನಾಗಿ ಇಂಗ್ಲಿಷ್ ಮಾತನಾಡಬಲ್ಲೆ ಎಂದು ತೋರಿಸಿ ಕೊಳ್ಳಲು ಹೀಗೆ ಇಂಗ್ಲಿಷ್ ಹಿಂದೆ ಬಿದ್ದಿದ್ದಾರಾ? ನಟಿ ರಕ್ಷಿತಾ ಕೂಡಾ ಇಂಗ್ಲಿಷ್ ವ್ಯಾಮೋಹದ ಇನ್ನೊಂದು ಉದಾಹರಣೆ. ಇಲ್ಲೇ ಹುಟ್ಟಿ ಬೆಳೆದು ಹೆಸರು ಮಾಡಿರುವ ಇವರಿಗೆ ಇಂಗ್ಲಿಷ್ ಅನ್ನೋದು ಬಹುಶಃ ಫ್ಯಾಷನ್ ಆಗಿ ಹೋಗಿದೆ.

    ಟಿವಿ ವಾಹಿನಿಗಳು ಕೂಡ ತಮ್ಮ ಜವಾಬ್ದಾರಿಯನ್ನು ತಿಳಿದಿರಬೇಕು. ಕನ್ನಡ ಬೆಳೆಸುವ ಮತ್ತು ಉಳಿಸುವ ವಿಷಯದಲ್ಲಿ ಮಾಧ್ಯಮಗಳ ಜವಾಬ್ದಾರಿ ಬಹು ದೊಡ್ಡದು. ಸಾಧ್ಯವಾದಷ್ಟು ಕನ್ನಡ ಪದಗಳನ್ನು ಬಳಸಿ. ಎಷ್ಟರ ಮಟ್ಟಿಗೆ ಇಂಗ್ಲಿಷ್ ನಮ್ಮನ್ನು ಆವರಿಸಿ ಕೊಂಡಿದೆ ಅಂದರೆ ಕೆಲವೊಂದು ಕನ್ನಡ ಪದಗಳನ್ನು ಮರತೇ ಬಿಟ್ಟಿದ್ದೇವೆ. ವಾಹಿನಿಗಳ ನಿರೂಪಕರು ಕೂಡ ಹೆಚ್ಚಿನ ಇಂಗ್ಲಿಷ್ ಪದ ಬಳಸದೆ ಕನ್ನಡತನ ಮೆರೆಯಲಿ ಎನ್ನುವುದು ನನ್ನ ಆಶಯ.

    English summary
    After actress-turned-producer Raksita, another Kannada actress has apperantly developed a kind of allergy about Kannada. It is none other than controversial queen Ramya, who was once a arch rival of Rakshita. The Golden girl always prefers English to Kannada in all the press meets and interviews to TV channels. Why does she prefer English? Does she think speaking Kannada is mean?
    Thursday, September 15, 2011, 16:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X