»   » ದಕ್ಷಿಣದ ಚೆಲುವೆ ಭಾವನಾ ಕನ್ನಡಕ್ಕೆ ಪದಾರ್ಪಣೆ

ದಕ್ಷಿಣದ ಚೆಲುವೆ ಭಾವನಾ ಕನ್ನಡಕ್ಕೆ ಪದಾರ್ಪಣೆ

Posted By:
Subscribe to Filmibeat Kannada

ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ಭಾವನಾ ಇದೀಗ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ 'ಜಾಕಿ' ಚಿತ್ರದ ನಾಯಕಿಯಾಗಿ ಭಾವನಾ ಕನ್ನಡ ಚಿತ್ರರಂಗಕ್ಕೆ ಅಡಿಯಿಡಲಿದ್ದಾರೆ.

ದುನಿಯಾ, ಇಂತಿ ನಿನ್ನ ಪ್ರೀತಿಯಾ, ಜಂಗ್ಲಿ ಖ್ಯಾತಿಯ ಸೂರಿ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳಲಿರುವುದು ಗೊತ್ತೇ ಇದೆ. ಜಾಕಿ ಚಿತ್ರಕ್ಕೆ ಆಯ್ಕೆಯಾಗಿರುವ ಬಗ್ಗೆ ಭಾವನಾ ಮಾತನಾಡುತ್ತಾ, ಪುನೀತ್ ರಾಜ್ ಕುಮಾರ್ ಚಿತ್ರಗಳನ್ನು ನೋಡಿಲ್ಲ ಆದರೆ ಅವರ ಚಿತ್ರಗಳ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಅವರೊಂದಿಗೆ ಅಭಿನಯಿಸಲು ಹಾತೊರೆಯುತ್ತಿದ್ದೇನೆ ಎಂದಿದ್ದಾರೆ.

ಭಾವನಾ ಆಯ್ಕೆಯ ಬಗ್ಗೆ ನಿರ್ದೇಶಕ ಸೂರಿ ಪ್ರತಿಕ್ರಿಯಿಸುತ್ತಾ, ಆಕೆ ಅಭಿನಯಿಸಿದ ಚಿತ್ರಂ ಪೆಸುತ್ತಾಡಿ ಹಾಗೂ ವೇಯಿಲ್ ಚಿತ್ರಗಳನ್ನು ನೋಡಿದ್ದೇನೆ. ಆಕೆ ಉತ್ತ್ತಮ ನಟಿ ಎಂಬುದನ್ನು ನಿರೂಪಿಸಿಕೊಂಡಿದ್ದಾರೆ. ಆಕೆಯ ಆಂಗಿಕ ಅಭಿನಯವೂ ಚೆನ್ನಾಗಿದೆ ಎನ್ನುತ್ತಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada