»   »  ಏಳು ಕೋಟಿ ರುಪಾಯಿ ನಿರೀಕ್ಷೆಯಲ್ಲಿ ದಯಾಳ್!

ಏಳು ಕೋಟಿ ರುಪಾಯಿ ನಿರೀಕ್ಷೆಯಲ್ಲಿ ದಯಾಳ್!

Subscribe to Filmibeat Kannada
Ganesh and Archana Gupta
ನಿರ್ಮಾಪಕ ಕಮ್ ನಿರ್ದೇಶಕ ದಯಾಳ್ ಪದ್ಮನಾಭ್ ರು.5 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ 'ಸರ್ಕಸ್' ಆಟ ಗುರುವಾರದಿಂದ ಶುರುವಾಗಿದೆ. ಸರ್ಕಸ್ ಚಿತ್ರ ಕರ್ನಾಟಕದ 75 ಕೇಂದ್ರಗಳಲ್ಲಿ ಬಿಡುಗಡೆಯಾಗಿದ್ದು ಈ ಚಿತ್ರದಿಂದ ದಯಾಳ್ ರು.7 ಕೋಟಿಲಾಭದ ನಿರೀಕ್ಷೆಯಲ್ಲಿದ್ದಾರೆ.

ಸರ್ಕಸ್ ಚಿತ್ರದ ನಾಯಕ ನಟ ಗಣೇಶ್ ತಮ್ಮ ಸಂಭಾವನೆಯನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿಕೊಂಡಿದ್ದು, ದಯಾಳ್ ಚಿತ್ರಕಥೆ ಕದ್ದಿದ್ದಾರೆ ಎಂದು ಎಸ್.ಮಹೇಂದರ್ ಆರೋಪಿಸಿದ್ದು, ನಂತರ ಈ ಗಲಾಟೆಗಳೆಲ್ಲಾ ಸುಖಾಂತ್ಯ ಕಂಡಿದ್ದು, ರಜನಿಕಾಂತ್ ಪುತ್ರಿ ಸೌಂದರ್ಯ ಅವರು ಸರ್ಕಸ್ ಚಿತ್ರವನ್ನು ವೀಕ್ಷಿಸಿ ತಮಿಳಿಗೆ ರೀಮೇಕ್ ಮಾಡುವುದಾಗಿ ಹೇಳಿದ್ದು....ಹೀಗೆ ಸರ್ಕಸ್ ಆರಂಭದಿಂದಲೂ ಒಂದಿಲ್ಲೊಂದು ಸುದ್ದಿಗೆ ಗ್ರಾಸವಾಗಿತ್ತು.

ಸರ್ಕಸ್ ಚಿತ್ರಕ್ಕೆ ಯು ಪ್ರಮಾಣ ಪತ್ರ ನೀಡಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದೆ. ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾರ ಆರಂಭಿಕ ಚಿತ್ರಗಳಂತೆ ನಮ್ಮ ಸರ್ಕಸ್ ಉತ್ತಮವಾಗಿ ಮೂಡಿಬಂದಿದೆ ಎನ್ನುತ್ತಾರೆ ದಯಾಳ್. ನಿರ್ದೇಶನ, ನಟನೆ, ಸಂಗೀತ, ಛಾಯಾಗ್ರಹಣ....ಹೇಗಿದೆ? ಎಂಬ ಪ್ರಶ್ನೆಗಳಿಗೆ ಗುರುವಾರದ(ಜ.15) ದಟ್ಸ್ ಕನ್ನಡ ಸಂಚಿಕೆಯಲ್ಲಿ ಪ್ರಕಟವಾಗುವ 'ಸರ್ಕಸ್ 'ಚಿತ್ರದ ವಿಮರ್ಶೆಗಾಗಿ ನಿರೀಕ್ಷಿಸಿ!

(ದಟ್ಸ್ ಕನ್ನಡ ಚಿತ್ರವಾರ್ತೆ)
ಸಕ್ಸಸ್ ಗಾಗಿ ಪದ್ಮನಾಭನ್ ದಯಾಳ್ ಸರ್ಕಸ್
ಸರ್ಕಸ್ ಚಿತ್ರದ ನಾಯಕಿಯ ಚಿತ್ರಪಟಗಳು
ಸಂಕ್ರಾಂತಿಗೆ ಸರ್ಕಸ್; ಈಗ ಗೀತಸಂಭ್ರಮ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada