»   »  ಹಾಸ್ಯ ನಟ ನರಸಿಂಹರಾಜು ಮೊಮ್ಮಕ್ಕಳ 'ಜುಗಾರಿ'

ಹಾಸ್ಯ ನಟ ನರಸಿಂಹರಾಜು ಮೊಮ್ಮಕ್ಕಳ 'ಜುಗಾರಿ'

Subscribe to Filmibeat Kannada

ಸಿ.ಎಂ. ಅಸೋಸಿಯೆಟ್ಸ್ ಲಾಂಛನದಲ್ಲಿ ಜಿ.ಆರ್.ರಮೇಶ್ ನಿರ್ಮಿಸುತ್ತಿರುವ 'ಜುಗಾರಿ' ಚಿತ್ರ ಪ್ರಸಾದ್ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಡಿಟಿಎಸ್ ತಂತ್ರಜ್ಞಾನದಿಂದ ಅಲಂಕೃತಗೊಳ್ಳುತ್ತಿದೆ. ಕುತೂಹಲಕಾರಿ ಸನ್ನಿವೇಶಗಳನ್ನೊಳಗೊಂಡಿರುವ ಈ ಚಿತ್ರಕ್ಕೆ ನಿರ್ಮಾಪಕರೇ  ಕಥೆ  ಬರೆದಿದ್ದಾರೆ. 'ಸುಮಾರು 30 ವರ್ಷಗಳಿಂದ ದಿನಪತ್ರಿಕೆಗಳನ್ನು ಓದುತ್ತಾ ಬಂದ ಅಭ್ಯಾಸವೇ ನನಗೆ ಕಥೆ ಬರೆಯಲು ಸ್ಪೂರ್ತಿಯಾಯಿತು ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಈ ಚಿತ್ರದ ವಿಶೇಷವೆನೆಂದರೆ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಕ್ಕಳ ಪಾಲ್ಗೊಳುವಿಕೆ. ನರಸಿಂಹರಾಜು ಅವರ ಮೊಮ್ಮಗ ಎಸ್.ಡಿ.ಅರವಿಂದ್ ಈ ಚಿತ್ರದ ನಿರ್ದೇಶಕರಾದರೆ ಅವರ ಸಹೋದರ ಅವಿನಾಶ್ ದಿವಾಕರ್  'ಜುಗಾರಿಯ ನಾಯಕ. ಮೇರು ನಟನ ಕುಟುಂಬದ ಮೂರನೇ ತಲೆಮಾರು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದೆ.

ನಿರ್ದೇಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಅರ್ಜುನ್ ಅವರ ಸಂಗೀತವಿದೆ. ಅನಂತ್  ಅರಸ್ ಕ್ಯಾಮೆರಾ, ಶ್ರೀ ಸಂಕಲನ, ರವಿವರ್ಮ ಸಾಹಸ, ನಾರಾಯಣಸ್ವಾಮಿ, ಕೆ.ಕಲ್ಯಾಣ್ ಹಾಗೂ ಎಸ್.ಡಿ.ಅರವಿಂದ್ ಗೀತರಚನೆಯಿರುವ 'ಜುಗಾರಿ'ಯ ತಾರಾಬಳಗದಲ್ಲಿ ಅವಿನಾಶ್ ದಿವಾಕರ್, ಹರ್ಷಿಕಾ ಪೂಣಚ್ಚ, ಅವಿನಾಶ್, ಶರತ್ ಲೋಹಿತಾಶ್ವಾ, ಬಿ.ಸುರೇಶ್, ಧರ್ಮ, ಮೋಹನ್ ಜುನೇಜಾ, ಗಿರಿಜಾ ಲೋಕೇಶ್, ಅಚ್ಯುತ್‌ಕುಮಾರ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada