»   »  ನಂ.1 ಪಟ್ಟಕ್ಕಾಗಿ ನಟಿ ರಮ್ಯಾ ಹಾರಾಟ,ಹೋರಾಟ!

ನಂ.1 ಪಟ್ಟಕ್ಕಾಗಿ ನಟಿ ರಮ್ಯಾ ಹಾರಾಟ,ಹೋರಾಟ!

Subscribe to Filmibeat Kannada
ಕನ್ನಡ ಚಿತ್ರರಂಗದ ನಂ.1 ನಟಿ ಎನ್ನಿಸಿಕೊಂಡಿದ್ದ ರಮ್ಯಾ ಸ್ಥಾನ ಈಗ ಪೂಜಾಗಾಂಧಿ ಪಾಲಾಗಿದೆ. ಸಾಲದ್ದಕ್ಕೆ ನಟಿ ರಮ್ಯಾ ಪಾಲಿಗೆ 2008ನೇ ವರ್ಷ ಸಾಕಷ್ಟು ಕಹಿ ಘಟನೆಗಳನ್ನು ಉಳಿಸಿದೆ. ಅಂತು ಇಂತು ಪ್ರೀತಿ ಬಂತು ಚಿತ್ರ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿದರೆ 'ಬೊಂಬಾಟ್' ಚಿತ್ರ ಗಳಿಕೆಯಲ್ಲಿ ಪರ್ವಾಗಿಲ್ಲ ಅನ್ನಿಸಿಕೊಂಡಿದೆ.

ನಟಿ ರಮ್ಯಾ ಗೆ ಕನ್ನಡ ಚಿತ್ರರಂಗದಲ್ಲಿ ಕ್ರಮೇಣ ಬೇಡಿಕೆ ಕಡಿಮೆಯಾಗುತ್ತಿದೆ. ಆದರೆ ತಮಿಳು ಚಿತ್ರರಂಗದಲ್ಲಿ ಆಕೆ ನಟಿಸಿದ 'ವರುಣಂ ಆಯಿರಂ' ಚಿತ್ರ ಹಿಟ್ ಆಗಿದ್ದು ರಮ್ಯಾ ಬೇಡಿಕೆ ಹೆಚ್ಚಾಗಿದೆ. ಕನ್ನಡ ಚಿತ್ರರಂಗದಲ್ಲಿನ ತನ್ನ ನಂ.1 ಪಟ್ಟವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ರಮ್ಯಾ ಮತ್ತೆ ಸ್ಯಾಂಡಲ್ ವುಡ್ ನತ್ತ ಲಗ್ಗೆಯಾಕಿದ್ದಾರೆ.

ಈಗಾಗಲೇ ಆಕೆ ನಟಿಸಿರುವ 'ಜೊತೆಗಾರ' ಮತ್ತು 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಪ್ರಸ್ತುತ ತಮಿಳಿನ 'ಕಾದಲ್ ಟು ಕಲ್ಯಾಣಂ' ಚಿತ್ರದಲ್ಲಿ ಬ್ಯುಸಿಯಾಗಿರುವ ರಮ್ಯಾ 5 ಹೊಸ ಕನ್ನಡ ಚಿತ್ರಗಳಿಗೆ ಸಹಿ ಹಾಕಿದ್ದಾರೆ. 'ಮೊಗ್ಗಿನ ಮನಸು' ನಿರ್ದೇಶಕ ಶಶಾಂಕ್ ರ ಮುಂದಿನ ಚಿತ್ರದಲ್ಲಿ ರಮ್ಯಾ ಪ್ರಧಾನ ಪಾತ್ರ ಪೋಷಿಸಲಿದ್ದಾರೆ. ಆ ದಿನಗಳು ಖ್ಯಾತಿಯ ನಿರ್ದೇಶಕ ಚೈತನ್ಯ ಸಹ ತಮ್ಮ ಮುಂದಿನ ಚಿತ್ರಕ್ಕೆ ಚೇತನ್ ಮತ್ತು ರಮ್ಯಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಇದಿಷ್ಟೇ ಅಲ್ಲದೆ ಭರತ್ ಮತ್ತು ಸುದೀಪ್ ರ ಚಿತ್ರಗಳು ರಮ್ಯಾ ಕೈಯಲ್ಲಿವೆ. ತಮಿಳಿನ ಚಿತ್ರವೊಂದನ್ನು ಗುರುದತ್ ಕನ್ನಡಕ್ಕೆ ರೀಮೇಕ್ ಮಾಡಲಿದ್ದು ಆ ಚಿತ್ರಕ್ಕೂ ರಮ್ಯಾನೇ ನಾಯಕಿಯಂತೆ. ಎಂ ಎಸ್ ಸತ್ಯು ಸಹ ತಮ್ಮ ಮುಂದಿನ ಚಿತ್ರಕ್ಕೆ ರಮ್ಯಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಒಟ್ಟಿನಲ್ಲಿ 2009 ರಮ್ಯಾ ಪಾಲಿಗೆ ಬಿಡುವಿಲ್ಲದ ವರ್ಷ ಎನ್ನಬಹುದು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮಂಡ್ಯ ಲೋಕಸಭೆಯಿಂದ ನಟಿ ರಮ್ಯಾ ಸ್ಪರ್ಧೆ?
ಕೋಮಲ್ ಜೊತೆಗಿನ ಸಿನಿಮಾಕ್ಕೆ ರಮ್ಯಾ ನಕಾರ?
ತಮಿಳಿನಲ್ಲಿ ರಮ್ಯಾ ನಟನೆ ನಿಷೇಧಕ್ಕೆ ಆಗ್ರಹ
ರಮ್ಯಾ ಮತ್ತು ಬಾಬು ನಡುವೆ ಬ್ಯಾಂಗ್ ಬ್ಯಾಂಗ್!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada