»   » ಕನ್ನಡದ 'ಕಲ್ಪನಾ'ಗೆ ಮುಹೂರ್ತ: ಉಪೇಂದ್ರ ಮಾತು

ಕನ್ನಡದ 'ಕಲ್ಪನಾ'ಗೆ ಮುಹೂರ್ತ: ಉಪೇಂದ್ರ ಮಾತು

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಸಾಯಿಕುಮಾರ್ ಅಭಿನಯದ ಬರಲಿರುವ ಚಿತ್ರ 'ಕಲ್ಪನಾ'ದ ಮುಹೂರ್ತ ನಿನ್ನೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಉಪೇಂದ್ರ ಮದುವೆ ವಾರ್ಷಿಕೋತ್ಸವದ ದಿನಾಚರಣೆಯ ಜೊತೆ ಈ ಚಿತ್ರದ ಮುಹೂರ್ತ ಕೂಡ ವಿಜೃಂಭಣೆಯಿಂದ ನಡೆಯಿತು.

ಮುಹೂರ್ತದ ವೇಳೆ ಮಾತನಾಡಿದ ಉಪ್ಪಿ "ಮೂಲ ಚಿತ್ರ 'ಕಾಂಚನಾ' ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಕನ್ನಡದಲ್ಲಿ ಇದನ್ನು 'ಕಲ್ಪನಾ' ಎನ್ನುವ ಹೆಸರಿನಲ್ಲಿ ತರಲಾಗುತ್ತಿದೆ. ಮೂಲ ಚಿತ್ರದ ನಿರ್ದೇಶಕರನ್ನು ನಾನು ಬಹಳ ಇಷ್ಟಪಡುತ್ತೇನೆ. ಕಾರಣ ಅವರ ನಿರ್ದೇಶನವಲ್ಲ, ಅವರ ಮನೋಜ್ಞ ನಟನೆ" ಎಂದಿದ್ದಾರೆ.

ಈ ಚಿತ್ರದಲ್ಲಿ ಉಪೇಂದ್ರ ಜೊತೆ ಸಾಯಿಕುಮಾರ್ ಕೂಡ ನಟಿಸಲಿದ್ದಾರೆ. ಅವರದು ಇದರಲ್ಲಿ 'ಖೋಜಾ' ಪಾತ್ರ. ನಾಯಕಿಯಾಗಿ ಬೆಳಗಾವಿಯ ಬೆಡಗಿ ಲಕ್ಷ್ಮೀ ರೈ ಆಯ್ಕೆಯಾಗಿದ್ದಾರೆ. ಈ ಚಿತ್ರವನ್ನು ನಿರ್ದೆಶಿಸಲಿದ್ದಾರೆ, ಖ್ಯಾತ ಗೀತ ಸಾಹಿತಿ ರಾಮ್ ನಾರಾಯಣ್. (ಒನ್ ಇಂಡಿಯಾ ಕನ್ನಡ)

English summary
Upendra and Sai Kumar starrer Kannada movie Kalpana took off yesterday on the occasion of the Real Stars wedding anniversary. The muhurath function of the film was held at Kanteerava studios, Bengaluru.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada