»   » ರಾಜ್ಯದ ಮೊದಲ ಉರ್ದು ಚಿತ್ರ 'ಆ ಬೈಲ್ ಮುಝೆ ಮಾರ್'

ರಾಜ್ಯದ ಮೊದಲ ಉರ್ದು ಚಿತ್ರ 'ಆ ಬೈಲ್ ಮುಝೆ ಮಾರ್'

Posted By:
Subscribe to Filmibeat Kannada

ಹಿಂದೆ 'ಕುಸುಮ' ಎಂಬ ಚಿತ್ರ ನಿರ್ಮಿಸಿದ್ದ ಎ.ಎ. ತುರಬಿ (ನವಾಜ್) ಅವರು ಇದೀಗ ಹೊಸ ಚಿತ್ರವೊಂದನ್ನು ಉರ್ದು ಭಾಷೆಯಲ್ಲಿ ನಿರ್ಮಿಸುತ್ತಿದ್ದಾರೆ. 'ಆ ಬೈಲ್ ಮುಝೆ ಮಾರ್' ಎಂಬ ಈ ಚಿತ್ರದ ಮುಹೂರ್ತ ಸಮಾರಂಭ ಕಳೆದ ಮಂಗಳವಾರ ಸಂಜೆ ಎ.ಡಿ.ಎ. ರಂಗಮಂದಿರದಲ್ಲಿ ನೆರವೇರಿತು. ಕರ್ನಾಟಕದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಉರ್ದು ಚಿತ್ರವೆಂಬ ಹೆಗ್ಗಳಿಗೆ ಈ ಚಿತ್ರದ್ದಾಗಿರುತ್ತದೆ.

ಬಹಳ ದಿನಗಳಿಂದ ಕನ್ನಡ ಚಿತ್ರರಂಗದಲ್ಲಿದ್ದುಕೊಂಡು ಅನುಭವಿಯಾಗಿರುವ ಆಫ್ತಾಬ್ ಖಾನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದೊಂದು, ಸಂಪೂರ್ಣ ಕಾಮಿಡಿ ಚಿತ್ರವಾಗಿದ್ದು, ನಾಯಕ ತನ್ನ ಕೆಲಸವನ್ನು ತಾನೇ ಸ್ವತಃ ಹಾಳುಮಾಡಿಕೊಳ್ಳುವಂತಹ ಕಥೆ ಈಚಿತ್ರದಲ್ಲಿದೆ. ಈಗಾಗಲೇ, ಹೀರೋ ನಾನಲ್ಲ, ಚಿತ್ರದಲ್ಲಿ ನಾಯಕನಾಗಿರುವ ಸಲೀಂ ಈಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಪ್ರಾರಂಭದಲ್ಲಿ ಹಾಸ್ಯದಿಂದ ಸಾಗುವ ಕಥೆ ದ್ವಿತಿಯಾರ್ಧದಲ್ಲಿ ಹೊಸ ತಿರುವುಪಡೆದುಕೊಳ್ಳುತ್ತದೆ. ಚಿತ್ರದ ನಾಲ್ಕುಜನ ನಾಯಕಿಯರಾಗಿ ಸೀಮಾ, ಶೀಲಾ, ತೃಪ್ತಿ ಹಾಗೂ ಕಾಮನಾ ಅಭಿನಯಿಸುತ್ತಿದ್ದಾರೆ. ಫೆಬ್ರವರಿ 15ರಿಂದ ನಿರಂತರ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಹಾಗೂ ಹೈದರಾಬಾದ್ ನಗರದಲ್ಲಿ ನಡೆಯಲಿದೆ.

ಚಿತ್ರದ ಮೂರು ಹಾಡುಗಳಿಗೆ ಎಂ.ಎನ್. ಕೃಪಾಕರ್ ರವರ ಸಂಗೀತ ಸಂಯೋಜನೆ, ರಮೇಶ್ ಅಲ್ಬೆ ಛಾಯಾಗ್ರಹಣ, ಮಲ್ಲರೆಡ್ಡಿ ಸಂಕಲನ, ಮುತ್ತುರಾಜ್ ಕಲಾನಿರ್ದೇಶನ, ಸೈಯಫ್ ಅವರ ಸಂಭಾಷಣೆ, ಸೂಪರ್ ಫಿಲಂಸ್‌ನ ಕಥೆ ಇದೆ. ಚಿತ್ರ ಉಳಿದ ತಾರಾಗಣದಲ್ಲಿ ಅಜಗರ್ ಅಲಿ, ರಾಜಾ ಮುರಾದ್, ಶಕ್ತಿಕಪೂರ್, ಶಬ್ಬೀರ್ ಖಾನ್, ನವೀದ್ ಪಾಷಾ, ರಜಾಕ್ ಖಾನ್ ಹಾಗೂ ಕನ್ನಡದ ಕಿಶೋರಿ ಬಲ್ಲಾಳ್ ಅಭಿನಯಿಸುತ್ತಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada