»   » ಪ್ರಸಿದ್ದ ವ್ಯಕ್ತಿಯೊರ್ವನಿಂದ ನಾಯಕಿಯ ಅಪಹರಣ!

ಪ್ರಸಿದ್ದ ವ್ಯಕ್ತಿಯೊರ್ವನಿಂದ ನಾಯಕಿಯ ಅಪಹರಣ!

Posted By:
Subscribe to Filmibeat Kannada

ಪ್ರಸಿದ್ದ ವ್ಯಕ್ತಿಯೊರ್ವನಿಂದ ನಾಯಕಿಯ ಅಪಹರಣ. ಈ ವಿಷಯ ತಿಳಿದ ನಾಯಕನಿಂದ ನಾಯಕಿಗಾಗಿ ಶೋಧ. ಕೊನೆಗೆ ಆಕೆಯಿರುವ ಸ್ಥಳ ಪತ್ತೆ ಹಚ್ಚುವಲ್ಲಿ ನಾಯಕ ಸಫಲ. ಚಕ್ರವ್ಯೂಹದಂತಿದ್ದ ಅಲ್ಲಿನ ಕಾವಲು ಪಡೆಯನ್ನು ಮಟ್ಟ ಹಾಕಿದ ನಾಯಕ ಒಳ ಪ್ರವೇಶಿಸುತ್ತಾನೆ. ನಂತರ ನಾಯಕ ಹಾಗೂ ಅಪಹರಿಸಿರುವ ವ್ಯಕ್ತಿಯ ನಡುವೆ ಹೊಡೆದಾಟವಾಗುತ್ತದೆ.

ಆ ಹೊಡೆದಾಟದಲ್ಲಿ ಜಯಶೀಲನಾದ ನಾಯಕ ನಾಯಕಿಯನ್ನು ಬಂಧನದಿಂದ ವಿಮುಕ್ತಿಗೊಳಿಸುತ್ತಾನೆ. ಈ ಸನ್ನಿವೇಶವನ್ನು ಮಿನರ್ವಮಿಲ್‌ನಲ್ಲಿ ಚಿತ್ರದ ನಾಯಕನೂ ಆಗಿರುವ ನಿರ್ದೇಶಕ ಹರೀಶ್‌ರಾಜ್ 'ಗನ್' ಚಿತ್ರಕ್ಕಾಗಿ ಚಿತ್ರಿಸಿಕೊಂಡರು. ಹರೀಶ್‌ರಾಜ್, ರಂಗಾಯಣರಘು ಹಾಗೂ ಮಲ್ಲಿಕಾಕಪೂರ್ ಅಭಿನಯಿಸಿದ ಈ ಸನ್ನಿವೇಶಕ್ಕೆ ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದರು.

ಹರೀಶ್‌ರಾಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮುರಳಿ ಅವರೊಂದಿಗೆ ಹರೀಶ್‌ರಾಜ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಚ್.ಎಮ್.ರಾಮಚಂದ್ರ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ. ರಾನಿ ರಾಫಲ್ ಅವರ ಸಂಗೀತವಿರುವ 'ಗನ್' ಚಿತ್ರಕ್ಕೆ ಹರೀಶ್‌ರಾಜ್, ಮಲ್ಲಿಕಾಕಪೂರ್, ರಂಗಾಯಣರಘು, ಸುಂದರಶ್ರೀ, ಸಂಗೀತಾ, ಮೋಹನ್‌ಜುನೆಜಾ, ಪಿ.ಎನ್.ಸತ್ಯ, ಬುಲೆಟ್‌ಪ್ರಕಾಶ್ ತಾರಾಬಳಗವಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada