»   »  ಮೇಘವೇ ಮೇಘವೇ ನಿರ್ಮಾಪಕ ರಘು ಬಂಧನ

ಮೇಘವೇ ಮೇಘವೇ ನಿರ್ಮಾಪಕ ರಘು ಬಂಧನ

Subscribe to Filmibeat Kannada

ನಿಧಿಗಳ್ಳತನಕ್ಕೆ ಸಂಬಂಧಿಸಿದಂತೆ 'ಮೇಘವೇ ಮೇಘವೇ' ಚಿತ್ರದ ನಿರ್ಮಾಪಕ ರಘುಕುಮಾರ್ ಸೇರಿದಂತೆ 10 ಮಂದಿಯನ್ನು ಬಂಧಿಸುವಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಪೊಲೀಸರು ಬುಧವಾರ(ಜು.15) ಯಶಸ್ವಿಯಾಗಿದ್ದಾರೆ.

ಹೊಸನಗರದ ಪೆಟ್ರೋಲ್ ಬಂಕ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಗಳನ್ನು ಗಮನಿಸಿದ ಪೊಲೀಸರು ತಕ್ಷಣ ಕಾರ್ಯಚರಣೆ ನಡೆಸಿ ನಿಧಿಗಳ್ಳರನ್ನು ಬಂಧಿಸಿದ್ದಾರೆ. ಕಾರಿನ ಮೇಲೆ ದಾಳಿ ನಡೆಸಿದ ಪೊಲೀಸರು ಅದರಲ್ಲಿದ್ದ ಗ್ಯಾಸ್ ಸಿಲೆಂಡರ್, ಆಕ್ಸಿಜನ್ ಮತ್ತಿತರ ನಿಧಿಗಳ್ಳತನಕ್ಕೆ ಬೇಕಿರುವ ವಸ್ತುಗಳು ಸೇರಿ ಸುಮಾರು 2 ಲಕ್ಷ ರುಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಂತರ ಹೊಸದುರ್ಗ ಪೊಲೀಸರು ವಿಚಾರಣೆ ನಡೆಸಿದ್ದು, ನಿಧಿಗಳ್ಳ ನೇತೃತ್ವ ವಹಿಸಿದ್ದ ನಿರ್ಮಾಪಕ ರಘುಕುಮಾರ್ ಆರ್ಥಿಕ ಸಂಕಷ್ಟದಲ್ಲಿದ್ದರು.ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು ನಿಧಿಯ ಹಿಂದೆ ಬಿದ್ದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada