'ರಾಮ್' ಅರ್ಧ ಶತಕ; ರು.20 ಕೋಟಿ ಗಳಿಕೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಮ್' ಚಿತ್ರ 25 ಕೇಂದ್ರಗಳಲ್ಲಿ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಹಾಗೆಯೇ 65 ಕೇಂದ್ರಗಳಲ್ಲಿ ಸರಾಸರಿ ದಿನಕ್ಕೆ ನಾಲ್ಕು ಪ್ರದರ್ಶನಗಳಂತೆ ಒಟ್ಟು 260 ಪ್ರದರ್ಶನಗಳೊಂದಿಗೆ ಅರ್ಧ ಶತಕ ಬಾರಿಸಿದೆ.
ಪುನೀತ್ ರಾಜ್ ಕುಮಾರ್ ಅವರೊಂದಿಗೆ ಪ್ರಿಯಾಮಣಿ ಕನ್ನಡದಲ್ಲಿ ಅಭಿನಯಿಸಿದ ಚೊಚ್ಚಲ ಚಿತ್ರ ಇದಾಗಿತ್ತು. ತೆಲುಗಿನ 'ರೆಡಿ' ಕನ್ನಡಕ್ಕೆ 'ರಾಮ್' ಆಗಿ ರೀಮೇಕ್ ಆಗಿತ್ತು. 'ರಾಮ್' ಚಿತ್ರ 50 ದಿನಗಳಲ್ಲಿ ಒಟ್ಟು ರು. 20 ಕೋಟಿ ಗಳಿಸಿದೆ ಎನ್ನುತ್ತವೆ ಚಿತ್ರೋದ್ಯಮದ ಮೂಲಗಳು.
ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಪುನೀತ್ ಅವರು ತಮ್ಮ ನಂಬರ್ ಒನ್ ಪಟ್ಟವನ್ನು ಹಾಗೆಯೇ ಉಳಿಸಿಕೊಂಡಿರುವುದು 'ರಾಮ್' ಯಶಸ್ಸು ಖಚಿತಪಡಿಸಿದೆ. ಏತನ್ಮಧ್ಯೆ ಹತ್ತು ದಿನಗಳ 'ಪೃಥ್ವಿ' ಚಿತ್ರೀಕರಣಕ್ಕಾಗಿ ಜೋರ್ಡಾನ್ ಗೆ ತೆರಳಿದ್ದ ಪುನೀತ್ ಇದೀಗ ಹಿಂತಿರುಗಿದ್ದಾರೆ. ಈ ಚಿತ್ರದ ನಾಯಕಿ ಪಾರ್ವತಿ ಮೆನನ್.
puneeth rajkumar ಪುನೀತ್ ರಾಜ್ ಕುಮಾರ್ ಬಾಕ್ಸಾಫೀಸ್ ರಾಮ್ ಮಾದೇಶ್ madesh ಪ್ರಿಯಾಮಣಿ priyamani ram ಪಾರ್ವತಿ ಮೆನನ್ parvathi menon prithvi ಪೃಥ್ವಿ box office repot


Click it and Unblock the Notifications