»   »  ಮಠಮಾನ್ಯಗಳ ಬಗ್ಗೆ ಹಿರಿಯನಟ ಶಿವರಾಂ ಖೇದ

ಮಠಮಾನ್ಯಗಳ ಬಗ್ಗೆ ಹಿರಿಯನಟ ಶಿವರಾಂ ಖೇದ

Subscribe to Filmibeat Kannada

ಈಗಿನ ದಿನಗಳಲ್ಲಿ ಮಠಮಾನ್ಯಗಳು ಸಮಾಜ ಸೇವೆ ಮಾಡುವುದನ್ನು ಬಿಟ್ಟು ರಾಜಕಾರಣದಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಿದೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗಲಿದೆ. ಕೆಲ ಸಾಮಂತ ಮಠಗಳು ಸಮಾಜವನ್ನು ತಿದ್ದುವ ಕೆಲಸವನ್ನು ಮಾಡುವುದನ್ನು ಬಿಟ್ಟು ರಾಜಕಾರಣ ಮಾಡುತ್ತಿರುವುದು ತುಂಬಾ ವಿಷಾದನೀಯ ಸಂಗತಿ ಎಂದು ಹಿರಿಯ ನಟ ಶಿವರಾಂ ಖೇದ ವ್ಯಕ್ತಪಡಿಸಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ತಿಮ್ಮಯ್ಯ ಭಾರತೀ ಸ್ವಾಮೀಜಿಗಳಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಮಠಗಳು ರಾಜಕಾರಣದಲ್ಲಿ ತೊಡಗಿದರೆ ಸಮಾಜದ ವಾತಾವರಣ ಕಲುಷಿತಗೊಳ್ಳುತ್ತದೆ. ಎಲ್ಲಾ ಸ್ವಾಮೀಜಿಗಳು ರಾಜಕಾರಣ ಮಾಡುತ್ತಾರೆಂದು ನಾನು ಹೇಳುತ್ತಿಲ್ಲ, ಇಂದಿಗೂ ಕೆಲ ಸ್ವಾಮೀಜಿಗಳು ಸಮಾಜ ಸೇವೆ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದರೆಂದು ಶಿವರಾಂ ಹೇಳಿದ್ದಾರೆ. ಈ ಸಮಾರಂಭದಲ್ಲಿ ಸಂಗೀತ ವಿದುಷಿ ಶ್ಯಾಮಲಾ ಭಾವೆ ಕೂಡಾ ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada