»   » ಅಭಯ ಸಿಂಹ ಹೊಸ ಶಿಕಾರಿ ಪೂನಂ ಬಾಜ್ವ!

ಅಭಯ ಸಿಂಹ ಹೊಸ ಶಿಕಾರಿ ಪೂನಂ ಬಾಜ್ವ!

Posted By:
Subscribe to Filmibeat Kannada

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಅಭಯ ಸಿಂಹ ನಿರ್ದೇಶನದ 'ಶಿಕಾರಿ' ಚಿತ್ರಕ್ಕೆ ಪಂಜಾಬಿ ಬೆಡಗಿ ಪೂನಂ ಬಾಜ್ವ ಆಯ್ಕೆಯಾಗಿದ್ದಾರೆ. ಮಮ್ಮುಟ್ಟಿ ಅವರೊಂದಿಗೆ ಪೂನಂ ಹೆಜ್ಜೆ ಹಾಕಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಹಿಂದೆ ಈಕೆ ದರ್ಶನ್ ಜೊತೆ 'ತಂಗಿಗಾಗಿ' ಚಿತ್ರದಲ್ಲಿ ಅಭಿನಯಿಸಿದ್ದರು.

ಈ ಚಿತ್ರದಲ್ಲಿ ಮಮ್ಮುಟ್ಟಿ ಅವರದು ದ್ವಿಪಾತ್ರಾಭಿನಯ. ಬೇಟಗಾರನಾಗಿ ಹಾಗೂ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಅವರು ಕಾಣಿಸಲಿದ್ದಾರೆ. ಶಿಕಾರಿಯ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಮುಗಿದಿದೆ. ಎರಡನೆ ಹಂತದ ಚಿತ್ರೀಕರಣ ತೀರ್ಥಹಳ್ಳಿ ಮತ್ತು ಆಗುಂಬೆಯ ದಟ್ಟ ಹಸಿರು ಸಿರಿಯ ನಡುವೆ ನಡೆಯಲಿದೆ. ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ 'ಶಿಕಾರಿ' ನಡೆಯಲಿದೆ.

ಮೊದಲ ಹಂತದ ಚಿತ್ರೀಕರಣದಲ್ಲಿ ಆದಿತ್ಯ ಮತ್ತು ಮೋಹನ್ ಅವರು ಮಮ್ಮುಟ್ಟಿ ಜೊತೆ ಅಭಿನಯಿಸಿದ್ದರು. ಎರಡನೆ ಹಂತದಲ್ಲಿ ಮಲಯಾಳಂ ನಟರು ಭಾಗವಹಿಸಲಿದ್ದಾರೆ. ಈ ಚಿತ್ರಕ್ಕೆ ಶ್ರದ್ಧಾ ಆರ್ಯ, ಕೊಂಕಣಾ ಸೇನ್ ಹೆಸರುಗಳು ಕೇಳಿಬಂದಿದ್ದವು. ಆದರೆ ಕಡೆಗೆ ಪೂನಂ ಬಾಜ್ವ ಆಯ್ಕೆಯಾಗಿದ್ದಾರೆ.

ಪೂನಂ ಬೆಳ್ಳಿತೆರೆಗೆ ಅಡಿಯಿಟ್ಟಿದ್ದು 2005ರಲ್ಲಿ. ಹೆಚ್ಚಾಗಿ ಆಕೆ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ಸ್ಟಾರ್ ನಾಗಾರ್ಜುನ ಮತ್ತು ನಯನತಾರಾ ಮುಖ್ಯಭೂಮಿಕೆಯಲ್ಲಿದ್ದ 'ಬಾಸ್ ಐ ಲವ್ ಯು' ಚಿತ್ರದ ಮೂಲಕ ಪೂನಂ ತಮ್ಮ ಖಾತೆಯನ್ನು ತೆರೆದಿದ್ದರು. ಬಹುತೇಕ ಚಿತ್ರಗಳಲ್ಲಿ ಎರಡನೆ ನಾಯಕಿಯಾಗಿ ಮಿಂಚಿದ್ದ ಪೂನಂ ಕನ್ನಡದಲ್ಲಿ ತನ್ನದೊಂದು ಛಾಪು ಮೂಡಿಸಲು ಸಿದ್ಧರಾಗಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada