»   »  ಪುನೀತ್ ಗೆ ಕನ್ನಡದಲ್ಲಿ ಅತಿಹೆಚ್ಚು ಸಂಭಾವನೆ!

ಪುನೀತ್ ಗೆ ಕನ್ನಡದಲ್ಲಿ ಅತಿಹೆಚ್ಚು ಸಂಭಾವನೆ!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು? ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟಸಾಧ್ಯ. ಆದರೂ ಗಾಂಧಿನಗರದ ಮೂಲಗಳ ಪ್ರಕಾರ ಸದ್ಯಕ್ಕೆ ಕನ್ನಡದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್!

ಇಷ್ಟು ದಿನ ಪುನೀತ್ ಚಿತ್ರವೊಂದಕ್ಕೆ ಒಂದು ಕೋಟಿ ಎಂಟು ಲಕ್ಷ ಸಂಭಾವನೆ ಪಡೆಯುತ್ತಾರೆ ಎಂಬ ಮಾತಿತ್ತು. ಈಗ ಅವರ ಸಂಭಾವನೆ ದಿಢೀರನೆ ಏರಿಕೆ ಕಂಡಿದೆ. ಆರ್ಥಿಕ ಬಿಕ್ಕಟ್ಟಿನಲ್ಲೂ ಕನ್ನಡ ಚಿತ್ರೋದ್ಯಮ ಇಷ್ಟೊಂದು ಸಂಭಾವನೆ ಕೊಡುತ್ತದೆ ಎಂದರೆ ಆಶ್ಚರ್ಯವಾಗುತ್ತದೆ.

ಸೂರಪ್ಪ ಬಾಬು ನಿರ್ಮಿಸುತ್ತಿರುವ 'ಪೃಥ್ವಿ' ಚಿತ್ರಕ್ಕಾಗಿ ಪುನೀತ್ ಗೆ ಎರಡು ಕೋಟಿ ಏಳು ಲಕ್ಷ ಸಂಭಾವನೆ ನೀಡಲಾಗಿದೆಯಂತೆ. ಇದು ನಿಜವೇ ಆಗಿದ್ದರೆ ಕನ್ನಡ ಚಿತ್ರೋದ್ಯಮದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಾಯಕನಟನಾಗಿ ಪುನೀತ್ ದಾಖಲೆ ನಿರ್ಮಿಸಲಿದ್ದಾರೆ.

ರಾಮ್ ಬಾಬು ಪ್ರೊಡಕ್ಷನ್ಸ್ ಮೂಲಕ ಸೂರಪ್ಪ ಬಾಬು ಈ ಚಿತ್ರವನ್ನು ಸ್ವತಂತ್ರವಾಗಿ ನಿರ್ಮಿಸುತ್ತಿದ್ದಾರೆ. ಸವಾರಿ ಮತ್ತು ಮಿ.ಗರಗಸ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ಮಣಿಕಾಂತ್ ಖದ್ರಿ ಅವರ ಸಂಗೀತ ಪೃಥ್ವಿ ಚಿತ್ರಕ್ಕಿದೆ. 'ಸವಾರಿ' ಚಿತ್ರವನ್ನು ನಿರ್ದೇಶಿಸಿ ಗೆಲುವಿನ ಸವಾರಿ ಏರಿದ ಜಾಕೋಬ್ ವರ್ಗೀಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬುದು ಗೊತ್ತೇ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X