»   »  ರು.3 ಕೋಟಿ ವೆಚ್ಚದಲ್ಲಿ ರಾಜ್ ಚಿತ್ರದ ಹಾಡುಗಳು!

ರು.3 ಕೋಟಿ ವೆಚ್ಚದಲ್ಲಿ ರಾಜ್ ಚಿತ್ರದ ಹಾಡುಗಳು!

Posted By:
Subscribe to Filmibeat Kannada
'ರಾಜ್ ದಿ ಶೋ ಮ್ಯಾನ್' ಚಿತ್ರದ ನಾಯಕಿ ನಿಶಾ ಕೊಠಾರಿ ಕಾಲಿನ ಮೂಳೆ ಮುರಿದುಕೊಂಡಿರುವ ಕಾರಣ ಚಿತ್ರೀಕರಣ ಪ್ಯಾಕಪ್ ಹೇಳಲಾಗಿತ್ತು. ಈಗ ಕಾಲಿನ ಗಾಯ ವಾಸಿಯಾಗಿದ್ದು ರಾಜ್ ಚಿತ್ರೀಕರಣ ಮೇ 2 ರಿಂದ ಆರಂಭವಾಗಲಿದೆ. ಅಂದಹಾಗೆ ರಾಜ್ ಹಾಡುಗಳ ಚಿತ್ರೀಕರಣಕ್ಕೆ ಎಷ್ಟು ಖರ್ಚಾಗಿರಬಹುದು?

ಪ್ರೇಮ್ ನಿರ್ದೇಶನದ ಚಿತ್ರ ಎಂದರೆ ಹಾಡುಗಳದ್ದೇ ಅಬ್ಬ್ಬರ. ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರಗಳ ಅದ್ದೂರಿತನ ರಾಜ್ ನಲ್ಲೂ ಮುಂದುವರಿಯಲಿದೆ. ಹಾಡುಗಳ ಚಿತ್ರೀಕರಣಕ್ಕಾಗಿ ರು.3 ಕೋಟಿ ಖರ್ಚು ಮಾಡುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕ ಪ್ರೇಮ್. ಅತ್ತ ಪ್ರೇಮ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೆ ಇತ್ತ ಅವರ ಪತ್ನಿ ಪ್ರವಾಸ ಹೊರಡಲು ಸಿದ್ಧರಾಗುತ್ತಿದ್ದಾರೆ.

ಆದರೆ ರಕ್ಷಿತಾ ಅವರ ತಾಯಿ ಪ್ರವಾಸ ಗಿವಾಸ ಯಾವುದೂ ತೆಪ್ಪಗೆ ಮನೆಯಲ್ಲಿರು ಎನ್ನುತ್ತಿದ್ದಾರಂತೆ. ''ಸಮಸ್ಯೆಯಲ್ಲಾ ನಮ್ಮ ತಾಯಿಯದೇ, ಮಗುವನ್ನು ಎಲ್ಲಿಗೂ ಕೊಂಡೊಯ್ಯಬೇಡ. ಅದು ಇನ್ನೂ ಆರು ತಿಂಗಳ ಕೂಸು, ದೂರ ಪ್ರಯಾಣ ಬೇಡ ಎಂಬುದು ರಕ್ಷಿತಾ ತಾಯಿ ಅವರಹಿತೋಕ್ತಿಯಂತೆ. ಹಾಗಾಗಿ ನನ್ನೊಂದಿಗೆ ನನ್ನ ಸಹೋದರ ಅಭಿಷೇಕ್ ನನ್ನು ಕರೆದೊಯ್ಯುತ್ತಿದ್ದೇನೆ. ಹೇಗಿದ್ದರೂ ಅವನಿಗೀಗ ಬೇಸಿಗೆ ರಜೆಗಳು ಎನ್ನುತ್ತಾರೆ ರಕ್ಷಿತಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಣ್ಣಾವ್ರ ಹುಟ್ಟುಹಬ್ಬಕ್ಕೆ ರಾಜ್ ಬಿಡುಗಡೆ ಇಲ್ಲ
ರಾಜ್, ದಿ ಶೋ ಮ್ಯಾನ್ ಧ್ವನಿಸುರಳಿ ವಿಮರ್ಶೆ
ರಾಜ್ ನಲ್ಲಿ ಬೆಳ್ಳಿತೆರೆಯ ಬಂಗಾರಿಯರ ಥೈಥೈ
ರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ
ದಾಖಲೆ ಮಾರಾಟ ಕಂಡರಾಜ್ ಧ್ವನಿಸುರುಳಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada