For Quick Alerts
  ALLOW NOTIFICATIONS  
  For Daily Alerts

  ಅಣ್ಣಾ ಪಕ್ಷಕ್ಕೆ ಜೈ ಎಂದ ಸೂಪರ್ ಸ್ಟಾರ್ ರಜನಿಕಾಂತ್

  By Rajendra
  |

  ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಯಾವ ರಾಜಕೀಯ ಪಕ್ಷ ಸೇರಲಿದ್ದಾರೆ ಎಂಬ ತೀವ್ರ ಕುತೂಹಲ ರಾಜಕೀಯ ವಲಯದಲ್ಲಿ ಮನೆಮಾಡಿದೆ. ಮೊನ್ನೆ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಇತ್ತು. ನೆನ್ನೆ ಜಯಲಲಿತಾ ಎಐಎಡಿಎಂಕೆ ಪಕ್ಷಕ್ಕೆ ಸೇರಲಿದ್ದಾರೆ ತೂರಿ ಬಂತು. ಈ ಸುದ್ದಿಯ ಸತ್ಯಾಸತ್ಯತೆಗಳು ಏನೋ ಎಂತೋ ಗೊತ್ತಿಲ್ಲ. ಆದರೆ ಅವರು ಭ್ರಷ್ಟಾಚಾರ, ಲಂಚಾವತಾರದ ವಿರುದ್ಧ ಸಮರ ಸಾರಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಸಾಮಾಜಿಕ ಪಕ್ಷ ಸೇರುವುದಾಗಿ ಸ್ಪಷ್ಟವಾಗಿ ತಿಳಿದ್ದಾರೆ.

  ರಜನಿಕಾಂತ್ ಅವರು ಈ ಹಿಂದೆಯೇ ಸಾಮಾಜಿಕ ಸೇವೆಗೆ ಧುಮುಕಬೇಕಾಗಿತ್ತು. ಆದರೆ ಅವರ ಆರೋಗ್ಯ ಇದಕ್ಕೆ ಸಹಕರಿಸದ ಕಾರಣ ಅವರು ಸಾಮಾಜಿಕ ಸೇವೆಯಿಂದ ದೂರ ಇದ್ದರು. ಇಳಿ ವಯಸ್ಸಿನಲ್ಲೂ ಅಣ್ಣಾ ಹಜಾರೆ ಹರಯದಯುವಕನಂತೆ ಹೋರಾಟ ಮಾಡುತ್ತಿರುವುದು ರಜನಿ ಅವರನ್ನು ಸಾಮಾಜಿಕ ಸೇವೆಗೆ ಧುಮುಕಲು ಪ್ರೇರಣೆ ನೀಡಿದೆ.

  ಈ ವಿವರಗಳನ್ನು ರಜನಿಕಾಂತ್ ಅವರು ಖಾಸಗಿ ಟಿವಿ ವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ. ಜನ ಲೋಕಪಾಲ ಮಸೂದೆಯನ್ನು ಮಂಡಿಸಲು ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯವಿದೆ. ಹಾಗಾಗಿ ತಾವು ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ಹಠಾವೋ ಆಂದೋಲನಕ್ಕೆ ಧುಮುಕುತ್ತಿರುವುದಾಗಿ ರಜನಿ ತಿಳಿಸಿದ್ದಾರೆ.

  English summary
  Superstar Rajinikanth reportedly expressed a desire to join social activist Anna Hazare in Delhi soon. A popular television channel has reported that our Superstar couldn't join the social movement earlier due to health problems.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X