For Quick Alerts
  ALLOW NOTIFICATIONS  
  For Daily Alerts

  ಗೋಪಿಕಾ ಮಾನಸ ಚೋರನಿಗೆ ರಮ್ಯಾ ಹೂಮಾಲೆ ಸೇವೆ

  By Rajendra
  |

  ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ಗೋಲ್ಡನ್ ಗರ್ಲ್ ರಮ್ಯಾ ಉಡುಪಿಗೆ ಭೇಟಿ ನೀಡಿ ಭಕ್ತ ವತ್ಸಲ ಶ್ರೀಕೃಷ್ಣನ ದರ್ಶನ ಭಾಗ್ಯ ಪಡೆದರು. ಶ್ರೀಕೃಷ್ಣನಿಗೆ ಹೂ ಮಾಲೆ ಸೇವೆಯನ್ನೂ ಸಲ್ಲಿಸಿದರು.

  ಆದರೆ ಹೂ ಮಾಲೆ ಕಟ್ಟಲು ರಮ್ಯಾ ಅವರಿಗೆ ಬರಲಿಲ್ಲ. ಅಲ್ಲಿನ ಮಹಿಳೆಯರ ಸಹಾಯದೊಂದಿಗೆ ಹೂ ಮಾಲೆಯನ್ನು ಕಟ್ಟಿ ಗೋಪಿಕಾ ಮಾನಸ ಚೋರನಿಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಅವರು ಹೂ ಮಾಲೆ ಕಟ್ಟುವುದು ಹೇಗೆ ಎಂಬುದನ್ನು ಕಲಿತುಕೊಂಡರು.

  ಬಳಿಕ ಅವರು ಪರ್ಯಾಯ ಮಠಾಧಿಪತಿಗಳಾದ ವಿಶ್ವವಲ್ಲಭ ತೀರ್ಥ ಸ್ವಾಮಿಜಿಗಳನ್ನು ಭೇಟಿ ಮಾಡಿ ಅವರ ಆಶೀರ್ವಚನ ಪಡೆದರು. ಕನಕದಾಸರ ಕಿಂಡಿ ಮೂಲಕ ಗೋಪಿಲೋಲ ಗೋಪಾಲನ ದರ್ಶನ ಭಾಗ್ಯವನ್ನು ಪಡೆದು ರಮ್ಯಾ ಭಕ್ತಿಯಲ್ಲಿ ಪರವಶರಾದರು. (ಏಜೆನ್ಸೀಸ್)

  English summary
  Golden Girl Ramya visits Udupi and offers specila puja at Sri Krishna Mutt. The actress campaigning in Kundapura, Udupi Dist for Congress candidate Jayaprakash Hegde.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X