»   » ಶಿವಣ್ಣನ ತಪ್ತ ಮನಸ್ಸಿನ ತಪಸ್ಸು 'ತಮಸ್ಸು'

ಶಿವಣ್ಣನ ತಪ್ತ ಮನಸ್ಸಿನ ತಪಸ್ಸು 'ತಮಸ್ಸು'

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ 'ತಮಸ್ಸು' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. 'ಆ ದಿನಗಳು', 'ಸ್ಲಂ ಬಾಲ', 'ಕಳ್ಳರ ಸಂತೆ' ರೀತಿಯ ನೈಜತೆಗೆ ಹತ್ತಿರವಾದ ಚಿತ್ರಗಳನ್ನು ಕೊಟ್ಟಂತಹ ಮೆಘಾ ಮೂವೀಸ್ ನಿರ್ಮಾಣದ ಮತ್ತೊಂದು ಚಿತ್ರ 'ತಮಸ್ಸು'.

ಶಿವಣ್ಣನಿಗೆ ಜೊತೆಯಾಗಿ ದಕ್ಷಿಣದ ಖ್ಯಾತ ತಾರೆ ಪದ್ಮಪ್ರಿಯಾ ಅಭಿನಯಿಸಿರುವ ಚಿತ್ರವಿದು. ಪತ್ರಕರ್ತ, ಸಂಭಾಷಣೆಕಾರ ಅಗ್ನಿ ಶ್ರೀಧರ್ ನಿರ್ದೇಶನದ ಚೊಚ್ಚಲ ಚಿತ್ರವೂ ಹೌದು. ತಮಸ್ಸು ಚಿತ್ರಮೇ ತಿಂಗಳಲ್ಲಿ ತೆರೆಗೆ ಅಪ್ಪಳಿಸುವುದು ಖಚಿತವಾಗಿದೆ. ಅಗ್ನಿ ಶ್ರೀಧರ್ ತಮ್ಮ ಮೊನಚಾದ ಲೇಖನಗಳಿಗೆ ಹೆಸರಾದವರು. ಈಗ ಅವರ ನಿರ್ದೇಶನದಲ್ಲಿ ಚಿತ್ರ ಹೇಗೆ ಬರುತ್ತದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ನೆಲೆಗೊಂಡಿದೆ.''ಕ್ರೌರ್ಯದ ಒಡಲಲ್ಲೂ ಅರಳುತ್ತವೆ ಮಾನವೀಯ ಸಂಬಂಧಗಳು'' ಎಂಬುದು ಚಿತ್ರದ ಒನ್ ಲೈನ್ ಕತೆ.

ಸಯದ್ ಅಮಾನ್ ಮತ್ತು ರವೀಂದ್ರ ನಿರ್ಮಾಣದ ಚಿತ್ರಕ್ಕೆ ಅಗ್ನಿ ಶ್ರೀಧರ್ ಕತೆ, ಚಿತ್ರಕತೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಚಿತ್ರದಲ್ಲಿ ನಾಸಿರ್ ನಿರ್ಣಾಯಕ ಪಾತ್ರವನ್ನು ಪೋಷಿಸಿದ್ದಾರೆ. ಉಳಿದ ತಾರಾಬಳಗದಲ್ಲಿ ಹರ್ಷಿಕಾ ಪೂಣಚ್ಛ, ಆಸಿಫ್, ಸುಧಾ ಬೆಳವಾಡಿ, ಸತ್ಯ ಮುಂತಾದವರಿದ್ದಾರೆ. ಸುಂದರನಾಥ ಸುವರ್ಣ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada