For Quick Alerts
  ALLOW NOTIFICATIONS  
  For Daily Alerts

  ಇದು ದರ್ಶನ್ - ರಕ್ಷಿತಾ ಜೋಡಿ ಸುಂಟರಗಾಳಿ ಎಬ್ಬಿಸಿದ್ದ ಸಮಯ

  |
  Darshan and Rakshita didn't forget this day.

  ನಟ ದರ್ಶನ್ ಜೊತೆಗೆ ಇತ್ತೀಚಿಗೆ ರಕ್ಷಿತಾ ಒಂದು ಫೋಟೋ ತೆಗೆದುಕೊಂಡು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ನೋಡಿದ ಅನೇಕರು ದರ್ಶನ್ ಸಿನಿಮಾದಲ್ಲಿ ರಕ್ಷಿತಾ ಕಾಣಿಸಿಕೊಳ್ಳುತ್ತಿದ್ದಾರಾ ಎನ್ನುವ ಕುತೂಹಲದಲ್ಲಿ ಪ್ರಶ್ನೆ ಹಾಕಿದ್ದರು.

  ದರ್ಶನ್ ಹಾಗೂ ರಕ್ಷಿತಾ ಮತ್ತೆ ಸಿನಿಮಾ ಮಾಡುತ್ತಾರೋ.. ಇಲ್ವೋ ಗೊತ್ತಿಲ್ಲ.. ಆದರೆ, ಇಬ್ಬರಿಗೆ ಈ ದಿನ ಸಂತಸದ ದಿನವಾಗಿದೆ. ಕನ್ನಡದ ಬೆಸ್ಟ್ ಜೋಡಿಗಳಲ್ಲಿ ಒಂದಾದ ದರ್ಶನ್ ಹಾಗೂ ರಕ್ಷಿತಾ ಮೊದಲ ಬಾರಿಗೆ ತೆರೆ ಮೆಲೆ ಒಂದಾಗಿ ಇಂದಿಗೆ 15 ವರ್ಷವಾಗಿದೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ನಟಿ ರಕ್ಷಿತಾ ಹೀಗೆ ಹೇಳಿದ್ದೇಕೆ?ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ನಟಿ ರಕ್ಷಿತಾ ಹೀಗೆ ಹೇಳಿದ್ದೇಕೆ?

  ದರ್ಶನ್ ಹಾಗೂ ರಕ್ಷಿತಾ ಮೊದಲು ನಟಿಸಿದ್ದ ಸಿನಿಮಾ 'ಕಲಾಸಿಪಾಳ್ಯ'. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 15 ವರ್ಷಗಳು ಕಳೆದಿದೆ.

  'ಕಲಾಸಿಪಾಳ್ಯ' ಸಿನಿಮಾಗೆ 15 ವರ್ಷ

  'ಕಲಾಸಿಪಾಳ್ಯ' ಸಿನಿಮಾಗೆ 15 ವರ್ಷ

  'ಕಲಾಸಿಪಾಳ್ಯ' ಸಿನಿಮಾ 15 ಅಕ್ಟೋಬರ್ 2004 ರಲ್ಲಿ ಬಿಡುಗಡೆಯಾಗಿದ್ದು, ಇಂದಿಗೆ 15 ವರ್ಷ ಆಗಿದೆ. ಈ ಸಂಭ್ರಮವನ್ನು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ದರ್ಶನ್ ಫ್ಯಾನ್ಸ್ ಕ್ಲಬ್ ಟ್ವಿಟ್ಟರ್ ಖಾತೆಯಲ್ಲಿ #15YearsForBBKalasipalya ಎಂಬ ಹ್ಯಾಶ್ ಟ್ಯಾಗ್ ಮೂಲಕ 'ಕಲಾಸಿಪಾಳ್ಯ'ದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಟ್ವಿಟ್ಟರ್ ತುಂಬ ಇದೇ ಪೋಸ್ಟ್ ಗಳು ಒಡಾಡುತ್ತಿದೆ.

  ಬೆಸ್ಟ್ ಜೋಡಿಯ ಮೊದಲ ಸಿನಿಮಾ

  ಬೆಸ್ಟ್ ಜೋಡಿಯ ಮೊದಲ ಸಿನಿಮಾ

  ಕನ್ನಡ ಚಿತ್ರರಂಗದ ಬೆಸ್ಟ್ ಜೋಡಿಗಳಲ್ಲಿ ದರ್ಶನ್ ಹಾಗೂ ರಕ್ಷಿತಾ ಜೋಡಿ ಕೂಡ ಒಂದು. ಈ ಇಬ್ಬರು ತೆರೆ ಮೇಲೆ ಕಾಂಬಿನೇಶನ್ ತುಂಬ ಚೆನ್ನಾಗಿ ಇತ್ತು. 'ಕಲಾಸಿಪಾಳ್ಯ'ದಲ್ಲಿ ಮೊದಲ ಬಾರಿಗೆ ಒಂದಾಗಿದ್ದ ದರ್ಶನ್ ಹಾಗೂ ರಕ್ಷಿತಾ ಮುಂದೆ 'ಸುಂಟರಗಾಳಿ', 'ಅಯ್ಯ', ಮಂಡ್ಯ ಸಿನಿಮಾಗಳಲ್ಲಿ ನಟಿಸಿದರು. ಈ ಜೋಡಿ ನಟಿಸಿದ ಎಲ್ಲ ಸಿನಿಮಾಗಳು ಹಿಟ್ ಲಿಸ್ಟ್ ಗೆ ಸೇರಿದವು.

  ದಶಕದ ಬಳಿಕ ತೆರೆ ಮೇಲೆ ರಕ್ಷಿತಾ: ಡಿಂಪಲ್ ಕ್ವೀನ್ ಜೊತೆ ಕ್ರೇಜಿ ಕ್ವೀನ್ ಡ್ಯಾನ್ಸ್ದಶಕದ ಬಳಿಕ ತೆರೆ ಮೇಲೆ ರಕ್ಷಿತಾ: ಡಿಂಪಲ್ ಕ್ವೀನ್ ಜೊತೆ ಕ್ರೇಜಿ ಕ್ವೀನ್ ಡ್ಯಾನ್ಸ್

  ಓಂ ಪ್ರಕಾಶ್ ರಾವ್ ನಿರ್ದೇಶನ, ಸಾಧು ಸಂಗೀತ

  ಓಂ ಪ್ರಕಾಶ್ ರಾವ್ ನಿರ್ದೇಶನ, ಸಾಧು ಸಂಗೀತ

  'ಕಲಾಸಿಪಾಳ್ಯ' ಸಿನಿಮಾ ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದ್ದರು. ಸಾಧು ಕೋಕಿಲ ಸಂಗೀತ ನೀಡಿದ್ದರು. ಸಾಧು ಕೋಕಿಲ ಹಾಗೂ ಬುಲೆಟ್ ಪ್ರಕಾಶ್ ನಡುವಿನ ಹಾಸ್ಯ ದೃಶ್ಯಗಳು ಸೂಪರ್ ಹಿಟ್ ಆದವು. ಬುಲೆಟ್ ಪ್ರಕಾಶ್ ಈ ಚಿತ್ರದಿಂದ ಇನ್ನಷ್ಟು ಅವಕಾಶ ಪಡೆದರು. ಈಗ ನಿರ್ಮಾಪಕರಾಗಿರುವ ಅಣಜಿ ನಾಗರಾಜ್ ಆಗಿನ್ನು ಕ್ಯಾಮರಾ ಮ್ಯಾನ್ ಆಗಿದ್ದರು.

  ರಾಮು ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣ

  ರಾಮು ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣ

  ರಾಮು ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗಿತ್ತು. ಆ ಚಿತ್ರ ಸಂಸ್ಥೆಯಲ್ಲಿ ಬಂದ ಹಿಟ್‌ ಸಿನಿಮಾಗಳ ಸಾಲಿಗೆ ಈ ಸಿನಿಮಾಗೆ ಸೇರಿಕೊಂಡಿತು. ಕಲಾಸಿಪಾಳ್ಯ ಸಾಮಾನ್ಯ ಹುಡುಗನ, ಬದುಕು ಒಂದು ಹೊಡೆದಾಟದಿಂದ ಹೇಗೆ ಬದಲಾಗುತ್ತದೆ ಎನ್ನುವುದು ಸಿನಿಮಾದ ಕಥೆಯಾಗಿತ್ತು. ಮಾಸ್ ಅಭಿಮಾನಿಗಳಿಗೆ ಸಿನಿಮಾ ಬಹಳ ಇಷ್ಟ ಆಗಿತ್ತು.

  English summary
  15 years for 'Kalasipalya' kannada movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X