»   » ಕಣ್ತೆರೆಸುವ ಸುದ್ದಿ: ಕಣ್ಣಿನ ದಾನಕ್ಕೆ ಮುಂದಾದ ಕನಸಿನಕನ್ಯೆ

ಕಣ್ತೆರೆಸುವ ಸುದ್ದಿ: ಕಣ್ಣಿನ ದಾನಕ್ಕೆ ಮುಂದಾದ ಕನಸಿನಕನ್ಯೆ

Posted By: Staff
Subscribe to Filmibeat Kannada
Actress Hemamalini
ಭುವನೇಶ್ವರ, ಅ.15 : ಡ್ರೀಮ್ ಗರ್ಲ್ ಖ್ಯಾತಿಯ ನಟಿ ಹೇಮಾಮಾಲಿನಿ(59) ತಮ್ಮ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.

'ವಿಷನ್2020'ಎಂಬ ಅಂಧತ್ವ ನಿವಾರಣೆಗೆ ಪಣ ತೊಟ್ಟಿರುವ ಸಂಸ್ಥೆಗೆ, ಹೇಮಾಮಾಲಿನಿ ವಿಶೇಷ ರಾಯಭಾರಿ. ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅಂಧತ್ವ ನಿವಾರಿಸಲು ಭಾರತದಲ್ಲಿ ವರ್ಷಕ್ಕೆ 2ಲಕ್ಷ ಕಣ್ಣುಗಳ ಅವಶ್ಯಕತೆ ಇದೆ. ಆದರೆ 34,000ದಷ್ಟು ಕಣ್ಣುಗಳು ಮಾತ್ರ ಲಭ್ಯವಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ಮಾನವನ ದೇಹದ ಅತ್ಯಂತ ಮೋಹಕ ಅಂಗಗಳು ಕಣ್ಣುಗಳು. ಪ್ರತಿಯೊಬ್ಬರೂ ತಮ್ಮ ಕಣ್ಣುಗಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದ ಹೇಮಮಾಲಿನಿ, ದೇಶದಲ್ಲಿ ಹಲವಾರು ಮಕ್ಕಳು ಅಂಧತ್ವದಿಂದ ನರಳುತ್ತಿರುವುದನ್ನು ನೆನೆಸಿಕೊಂಡರು. ಅಂಧತ್ವ ನಿವಾರಣೆಗೆ ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಕರೆ ನೀಡಿದರು.

ನಿಮ್ಮ ಕಣ್ಣುಗಳ ಬಗ್ಗೆ ಹೇಗೆ ಜಾಗ್ರತೆ ವಹಿಸುತ್ತೀರಿ? ಎಂಬ ಪ್ರಶ್ನೆಗೆ, ನನ್ನ ನೃತ್ಯ ಕಾರ್ಯಕ್ರಮಗಳು ಮತ್ತು ಚಿತ್ರೀಕರಣದ ವೇಳೆ ಕಣ್ಣು ಕೋರೈಸುವ ಬೆಳಕು ಮತ್ತು ಮೇಕಪ್‌ನಿಂದ ಉಂಟಾಗುವ ತೊಂದರೆಯನ್ನು ತಪ್ಪಿಸಲು ರೇಖಿ ಚಿಕಿತ್ಸೆಗೆ ಮೊರೆ ಹೋಗುತ್ತಿರುವುದಾಗಿ ಅವರು ತಿಳಿಸಿದ್ದಾರೆ.

(ಏಜನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada