»   » ಬ್ರೇಕಿಂಗ್ ನ್ಯೂಸ್ ನೀಡಲು ನಟಿ ನಯನತಾರಾ ಸಿದ್ಧತೆ

ಬ್ರೇಕಿಂಗ್ ನ್ಯೂಸ್ ನೀಡಲು ನಟಿ ನಯನತಾರಾ ಸಿದ್ಧತೆ

Posted By:
Subscribe to Filmibeat Kannada

ದಕ್ಷಿಣದ ಬೆಡಗಿ ನಯನತಾರಾ ಶೀಘ್ರದಲ್ಲೆ ಬ್ರೇಕಿಂಗ್ ನ್ಯೂಸ್ ನೀಡಲಿದ್ದಾರೆ. ನವೆಂಬರ್ 18ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು ಅಂದೇ ವಿಶೇಷ ಸುದ್ದಿಯನ್ನೂ ಪ್ರಕಟಿಸುವುದಾಗಿ ತಮಿಳು ದೈನಿಕ ಪತ್ರಿಕೆಗಳಲ್ಲಿ ವರದಿ ಮಾಡಿವೆ. ನಯನತಾರಾ ನೀಡಲಿರುವ ಬ್ರೇಕಿಂಗ್ ನ್ಯೂಸ್‌ಗಾಗಿ ಅಭಿಮಾನಿಗಳು ಉಸಿರುಬಿಗಿ ಹಿಡಿದು ಕಾದಿದ್ದಾರೆ.

ಈಕೆ ಅಭಿನಯದ ತೆಲುಗಿನ 'ಶ್ರೀರಾಮರಾಜ್ಯಂ' ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಅದರಲ್ಲಿನ ಸೀತೆಯ ಪಾತ್ರ ಪೋಷಣೆ ನನ್ನ ವೃತ್ತಿಜೀವನದಲ್ಲೇ ಅತ್ಯಂತ ಸಂತೃಪ್ತಿ ನೀಡಿದ ಪಾತ್ರ ಎಂದಿದ್ದಾರೆ. ತಮ್ಮ ಭಾವಿ ಪತಿ ಪ್ರಭುದೇವ ಅವರೊಂದಿಗೆ ಕೂತು ಈ ಚಿತ್ರವನ್ನು ಹೈದರಾಬಾದ್‌ನಲ್ಲಿ ವೀಕ್ಷಿಸುವುದಾಗಿ ನಯನಿ ಹೇಳಿದ್ದಾರೆ.

ಇಷ್ಟಕ್ಕೂ ನಯನತಾರಾ ಯಾವ ಬ್ರೇಕಿಂಗ್ ನ್ಯೂಸ್ ನೀಡಲಿದ್ದಾರೆ ಎಂಬ ಕುತೂಹಲ ಆಕೆಯ ಅಭಿಮಾನಿಗಳಲ್ಲಿ ಮನೆಮಾಡಿದೆ. ಪ್ರಭುದೇವ ಜೊತೆಗಿನ ತನ್ನ ಮದುವೆ ದಿನಾಂಕವನ್ನು ಪ್ರಕಟಿಸಲಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಚಿತ್ರರಂಗಕ್ಕೆ ಅಧಿಕೃತವಾಗಿ ಗುಡ್ ಬೈ ಘೋಷಿಸಲಿದ್ದಾರೆ. (ಏಜೆನ್ಸೀಸ್)

English summary
Nayantara to say goodbye to film industry after her marriage in June ... Sensuous Nayantara, who has been entertaining film lovers with her acting skills and skin shows, has decided to goodbye.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada