»   » ಬಾಲಿವುಡ್‌ಗೆ ಕಮಲಹಾಸನ್ ಕಿರಿಯ ಪುತ್ರಿ ಅಕ್ಷರಾ

ಬಾಲಿವುಡ್‌ಗೆ ಕಮಲಹಾಸನ್ ಕಿರಿಯ ಪುತ್ರಿ ಅಕ್ಷರಾ

Posted By:
Subscribe to Filmibeat Kannada

ಈಕೆಯ ಹೆಸರು ಅಕ್ಷರಾ ಹಾಸನ್. ನೋಡಲು ಅಕ್ಕ ಶ್ರುತಿ ಹಾಸನ್‌ಗಿಂತಲೂ ಸುಂದರವಾಗಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ಕಮಲಹಾಸನ್ ಹಾಗೂ ನಟಿ ಸಾರಿಕಾ ಅವರ ಕಿರಿಯ ಪುತ್ರಿ ಅಕ್ಷರಾ ಬಗ್ಗೆ. ಈಗ ಈಕೆ ಬಾಲಿವುಡ್‌ಗೆ ಅಡಿಯಿಡಲು ಸಿದ್ಧತೆ ನಡೆಸಿದ್ದಾರೆ.

ಈಗಾಗಲೆ ಈಕೆ ಚಿತ್ರರಂಗ ತಾಂತ್ರಿಕ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಚಿತ್ರ ನಿರ್ಮಾಪಕ ರಾಹುಲ್ ಧೋಲಾಕಿಯಾಗೆ ಸಹಾಯಕಳಾಗಿ ಕೆಲಸ ಮಾಡಿದ್ದಾರೆ. ತನ್ನ ಅಕ್ಕ ಶ್ರುತಿ ಹಾಸನ್ ಅವರಂತೆ ಅಕ್ಷರಾ ಸಹಾ ಬೆಳ್ಳಿಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಶ್ರುತಿ ಹಾಸನ್ ಅವರಂತೆ ಈಕೆಯೂ ಬಹುಮುಖ ಪ್ರತಿಭೆ.

'ಲಕ್' ಚಿತ್ರದ ಮೂಲಕ ಶ್ರುತಿ ಹಾಸನ್ ಬಾಲಿವುಡ್‌ಗೆ ಲಗ್ಗೆ ಹಾಕಿದ್ದರು. ಬಳಿಕ 'ದಿಲ್ ತೋ ಬಚ್ಚಾ ಹೈ ಜಿ' ಎಂದು ಯುವ ಹೃದಯಗಳಿಗೆ . ಈಗ ಅಕ್ಷರಾ ಹಾಸನ್ ಕೂಡ ಬಿಗ್ ಬಜೆಟ್ ಚಿತ್ರವೊಂದರ ಮೂಲಕ ಬೆಳ್ಳಿತೆರೆ ಅಲಂಕರಿಸಲಿದ್ದಾರೆ ಎನ್ನುತ್ತವೆ ಮೂಲಗಳು.

English summary
Renowned actor Kamal Hassan and actress Sarika young daughter Akshara Hassan is all set to take up the acting career. The buzz is that Akshara is all set to follow her elder sister’s Shruti’s footsteps as she is more keen on acting career.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada