»   » ಪ್ರೇಕ್ಷಕರ ಮುಂದೆ ಬಹುನಿರೀಕ್ಷಿತ 'ಆಪ್ತರಕ್ಷಕ'

ಪ್ರೇಕ್ಷಕರ ಮುಂದೆ ಬಹುನಿರೀಕ್ಷಿತ 'ಆಪ್ತರಕ್ಷಕ'

Posted By:
Subscribe to Filmibeat Kannada

ಸಾಹಸಸಿಂಹ ಡಾ:ವಿಷ್ಣುವರ್ಧನ್ ಅಭಿನಯದ 200ನೇ ಚಿತ್ರ 'ಆಪ್ತರಕ್ಷಕ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಷ್ಣುವರ್ಧನ್ ನಟನೆಯ ದ್ವಿಶತಕದ ಚಿತ್ರ ಅವರು ವಿದಿವಶರಾದ ನಂತರ ಬಿಡುಗಡೆಯಾಗುತ್ತಿರುವುದು ವಿಷಾದನೀಯ.

ಉದಯರವಿ ಫಿಲಂಸ್ ಲಾಂಚನದಲ್ಲಿ ಕೆ.ಕೃಷ್ಣಪ್ರಜ್ವಲ್ ನಿರ್ಮಿಸಿರುವ ಈ ಚಿತ್ರವನ್ನು 'ಆಪ್ತಮಿತ್ರ ಖ್ಯಾತಿಯ ಪಿ.ವಾಸು ನಿರ್ದೇಶಿಸಿದ್ದಾರೆ. ಪಿ.ಕೆ.ಎಚ್ ದಾಸ್ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ವಿ.ಆರ್.ಭಾಸ್ಕರ್ ಸಂಭಾಷಣೆ, ಗುರುಕಿರಣ್ ಸಂಗೀತ ಹಾಗೂ ರಾಂಶೆಟ್ಟಿ ರವರ ಸಾಹಸ ಸಂಯೋಜನೆಯಿದೆ.

ಚಿತ್ರದ ತಾರಾಬಳಗದಲ್ಲಿ ಡಾ:ವಿಷ್ಣುವರ್ಧನ್, ಸಂಧ್ಯಾ, ಭಾವನ, ಲಕ್ಷ್ಮೀಗೋಪಾಲಸ್ವಾಮಿ, ವಿಮಲರಾಮನ್, ಅವಿನಾಶ್, ಶ್ರೀನಿವಾಸಮೂರ್ತಿ, ವಿನಯಾಪ್ರಸಾದ್, ರಮೇಶ್‌ಭಟ್, ರವಿಚೇತನ್, ವಿನಿತ, ಮನದೀಪ್‌ರಾಯ್, ರಾಮಮೂರ್ತಿ, ಲಲಿತಾ, ಸಿಂಧು, ಮಾಲತಿಸರ್‌ದೇಶಪಾಂಡೆ, ರವೀಂದ್ರ, ರಾಜೇಶ್, ಬ್ರಹ್ಮಾವರ್, ಸುಚಿತ್ರಾ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada