For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಹುಟ್ಟುಹಬ್ಬಕ್ಕೆ ಪೊಲೀಸರಿಂದ ಅನುಮತಿ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್, ಇಂದು (ಫೆಬ್ರವರಿ 16, 2012) ರಂದು ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಮೊದಲು, ಅವರ ನಿವಾಸದಲ್ಲಿ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳಲು ರಾಜರಾಜೇಶ್ವರಿ ನಗರದ ಪೊಲೀಸರಿಂದ ಅನುಮತಿ ಸಿಕ್ಕಿರಲಿಲ್ಲ. ಆದರೆ ನಿನ್ನೆ ಸಾಯಂಕಾಲದ ಹೊತ್ತಿಗೆ ಅನುಮತಿ ಸಿಕ್ಕಿ ದರ್ಶನ್ ಹಾಗೂ ಅವರ ಅಭಿಮಾನಿಗಳು ನೆಮ್ಮದಿಪಡುವಂತಾಯಿತು.

  ಇದೀಗ ದರ್ಶನ್ ತಮ್ಮ ನಿವಾಸದಲ್ಲಿ ಸಾಂಪ್ರದಾಯಿಕವಾಗಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಹುಟ್ಟುಹಬ್ಬದ ನಿಮಿತ್ತ 'ಜಾಗ್ವಾರ್' ಕಾರ್ ಗಿಫ್ಟ್ ಕೊಟ್ಟಿದ್ದಾರೆ. ಅಭಿಮಾನಿಗಳ ಮಹಾಪೂರವೇ ದರ್ಶನ್ ಮನೆಯ ಮುಂದೆ ಜಮಾಯಿಸಿದೆ. 'ಅಣ್ಣಾ...ಅಣ್ಣಾ' ಎನ್ನುತ್ತಾ ದರ್ಶನ್ ಗೆ ಕೇಕ್, ಸ್ವೀಟ್ ಕೊಟ್ಟು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

  ಮಾಧ್ಯಮದೊಂದಿಗೆ ಮಾತನಾಡಿದ ದರ್ಶನ್ ತಾಯಿ ಮೀನಾ ತೂಗುದೀಪ, "ದರ್ಶನ್ ನನ್ನ ಮಗನಾಗಿ ಹುಟ್ಟಿರುವುದು ನನ್ನ ಭಾಗ್ಯ. ಅವರಿಗೆ ಇದೀಗ 35 ವರ್ಷ ತುಂಬಿದರೂ ಅವರು ಈಗಲೂ ನನ್ನ ಪಾಲಿಗೆ ಚಿಕ್ಕ ಮಗುವೇ" ಎಂದಿದ್ದಾರೆ. ಪತ್ನಿ ವಿಜಯಲಕ್ಷ್ಮಿಯ ಸಂಭ್ರಮ ಮುಗಿಲು ಮುಟ್ಟಿದೆ. ಇವೆಲ್ಲದರ ಅರ್ಥ ಅರಿಯದ ಪುಟಾಣಿ ವಿನೀಶ್ ಮುದ್ದುಮುದ್ದಾಗಿ ನಗುತ್ತಿದ್ದಾನೆ. ಒಟ್ಟಿನಲ್ಲಿ ಸಾರಥಿಯ ಹುಟ್ಟುಹಬ್ಬದ ಸಂಭ್ರಮಕ್ಕೆ ಬೆಳಿಗಿನಿಂದಲೂ ಜನಸಾಗರ ಸಾಗರೋಪಾದಿಯಲ್ಲಿ ಹರಿದುಬರುತ್ತಿದೆ. (ಒನ್ ಇಂಡಿಯಾ ಕನ್ನಡ)

  English summary
  Challenging Star Darshan is celebrating his 35th Birthday today, Feb 16, 2012. Yesterday Evening only he got permission from Rajarajeshwari Nagar Police Station to celebrate his Birthday. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X