»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು (ಫೆ.16) 33ನೇ ವಸಂತಕ್ಕೆ ಅಡಿಯಿಟ್ಟಿದ್ದಾರೆ. ಸೋಮವಾರ ಮಧ್ಯರಾತ್ರಿ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು. ರಾಜರಾಜೇಶ್ವರಿ ನಗರದ ತಮ್ಮ ಮನೆಯಲ್ಲಿ ಸಾವಿರಾರು ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬಕ್ಕೆ ಶುಭ ಕೋರಿದರು.

ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಇಂದು 'ಶೌರ್ಯ' ಸೆಟ್ಸ್ ನಲ್ಲೂ ಆಚರಿಸಿಕೊಳ್ಳಲಿದ್ದಾರೆ. ಬೆಳಗ್ಗೆ ಸುಮಾರು 11 ಗಂಟೆ ಹೊತ್ತಿಗೆ ಬೆಂಗಳೂರಿನಲ್ಲಿ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಶೌರ್ಯ ಸೆಟ್ಸ್ ನಲ್ಲಿ ಕೇವಲ ಒಂದು ತಾಸು ಮಾತ್ರ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಎಂದಿನಂತೆ ಹುಟ್ಟುಹಬ್ಬದ ದಿನ ಹೊಸ ಚಿತ್ರಗಳು ಘೋಷಣೆಯಾಗುವುದು ಮಾಮೂಲು. ಈ ಬಾರಿಯೂ ದರ್ಶನ್ ಅವರ ಹೊಸ ಚಿತ್ರಗಳು ಘೋಷಣೆಯಾಗಲಿವೆ. ಸಂದೇಶ್ ನಾಗರಾಜ್ ನಿರ್ಮಿಸಿ, ಓಂ ಪ್ರಕಾಶ್ ರಾವ್ ನಿರ್ದೇಶನದ 'ಪ್ರಿನ್ಸ್' ಚಿತ್ರದೊಂದಿಗೆ ಹಲವಾರು ಚಿತ್ರಗಳು ಘೋಷಣೆಯಾಗಲಿವೆ.

'ರಾಜ್' ನಿರ್ಮಾಪಕ ಸುರೇಶ್ ಗೌಡ ಹಾಗೂ ಶ್ರೀನಿವಾಸಮೂರ್ತಿ ಅವರ ಹೊಸ ಚಿತ್ರ, ಮಾದೇಶ್ ನಿರ್ದೇಶನದ ಕಲ್ಯಾಣ್ ಮೂವೀಸ್ ಚಿತ್ರ (ತೆಲುಗಿನ 'ಅತಡು' ರೀಮೇಕ್), ಅಶೋಕ್ ಕಾಮ್ಲೆ, ಪರೀಕ್ಷಿತ್ ಕಾಮ್ಲೆ ನಿರ್ಮಾಣದ ಚಿತ್ರ, ಬೆಸ್ಟ್ ಲಾಂಛನದಲ್ಲಿ ಓಂ ಪ್ರಕಾಶ್ ರಾವ್ ನಿರ್ದೇಶನದ ಚಿತ್ರ, ಉದಯರಂಗ ಮೂವೀಸ್ ನ 'ಪ್ರೊಡಕ್ಷನ್ ನಂ.1' ಚಿತ್ರಗಳು ಈಗಾಗಲೇ ಘೋಷಣೆಯಾಗಿವೆ.

ಸದ್ಯಕ್ಕೆ ದರ್ಶನ್ ಒಂದು ರೀಮೇಕ್ ಮತ್ತೊಂದು ಸ್ವಮೇಕ್ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. 'ಸಾರಥಿ' ಸ್ವಮೇಕ್ ಚಿತ್ರವಾದರೆ 'ಶೌರ್ಯ' ರೀಮೇಕ್. ಸಾರಥಿಯನ್ನು ಕೆಸಿಎನ್ ಚಂದ್ರಶೇಖರ್ ನಿರ್ಮಿಸುತ್ತಿದ್ದು ದಿನಕರ್ ತೂಗುದೀಪ ಆಕ್ಷನ್, ಕಟ್ ಹೇಳುತ್ತಿದ್ದಾರೆ. 'ಶೌರ್ಯ' ಚಿತ್ರ ಕೋಕಿಲ ಸಾಧು ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಈ ಚಿತ್ರವನ್ನು ಬಿ ಬಸವರಾಜು ಮತ್ತು ಎ ವೆಂಕಟೇಶ್ ನಿರ್ಮಿಸುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada