»   » ಬೆಂಗಾಲಿಗೆ ಕಾಲಿರಿಸಿದ ಕನ್ನಡದ ಹುಡುಗಿ ಛಾಯಾ

ಬೆಂಗಾಲಿಗೆ ಕಾಲಿರಿಸಿದ ಕನ್ನಡದ ಹುಡುಗಿ ಛಾಯಾ

Posted By:
Subscribe to Filmibeat Kannada

ಪ್ರಬುದ್ಧ ಪಾತ್ರಗಳತ್ತ ಗಮನ ಹರಿಸಿ, ಗಮನಾರ್ಹ ಅಭಿನಯ ನೀಡಿದರೂ, ಸ್ಯಾಂಡಲ್ ವುಡ್, ಕಾಲಿವುಡ್ ನಲ್ಲಿ ಭದ್ರವಾಗಿ ನೆಲೆ ನಿಲ್ಲಲು ನಟಿ ಛಾಯಾ ಸಿಂಗ್ ಗೆ ಯಾಕೋ ಆಗಿಲ್ಲ. ಕನ್ನಡದ್ದಲ್ಲಂತೂ ಬೇಡಿಕೆಯೇ ಇಲ್ಲ ಎನ್ನಬಹುದು. ಅಕಾಶಗಂಗೆ ನಂತರ ಛಾಯಾ ಈ ಕಡೆ ಕಾಣಿಸಿದ್ದಿಲ್ಲ.

ಇನ್ನು ಕಾಲಿವುಡ್ ನಲ್ಲಿ 'ತಿರುಡಾ ತಿರುಡಿ' ಚಿತ್ರದಲ್ಲಿ ಛಾಯಾ ನೀಡಿದ ಮಿಂಚಿನಂಥ ಅಭಿನಯವನ್ನೇ ಪ್ರತಿ ಬಾರಿ ಆಕೆಯ ಅಭಿಮಾನಿಗಳು ಬಯಸತೊಡಗಿದ್ದು, ಬಹುಶಃ ಆಕೆಯ ಸಿನಿ ಜೀವನಕ್ಕೆ ಮುಳುವಾಯಿತೆನ್ನಬಹುದು.

ವಿಮರ್ಶಕ ಮೆಚ್ಚುಗೆಯನ್ನೂ ಗಳಿಸುವಲ್ಲಿ ಸಫಲರಾಗಿರುವ ಛಾಯಾ, ಮಲೆಯಾಳಂನಲ್ಲೂ ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದಿದೆ. ತಮಿಳಿನಲ್ಲಿ 'ವಲ್ಲಮೈ ಥರಯೋ 'ಚಿತ್ರದ ಅಭಿನಯಕ್ಕೆ ಮೆಚ್ಚುಗೆ ಗಳಿಸಿದ ಮೇಲೆ 'ಅನಂತಪುರಥು ವೀಡು' ಚಿತ್ರ ಒಪ್ಪಿಕೊಂಡ ಛಾಯಾ ಅದರಲ್ಲೂ ಯಶಸ್ವಿಯಾದರು. ಚಿತ್ರ ಬಾಕ್ಸಾಫೀಸ್ ನಲ್ಲಿ ಭರ್ಜರಿ ವ್ಯಾಪಾರ ಆರಂಭಿಸಿದೆ.

ಆದರೆ, ಈಗ ಬೇಡಿಕೆ ತಮಿಳು ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ಛಾಯಾ ಸಿಂಗ್, ಇನ್ನೂ ಹೆಸರಿಡದ ಬೆಂಗಾಲಿ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಬೆಂಗಾಲಿಗೆ ಹಾರಲು ಏನು ಕಾರಣ ಎಂದರೆ, ಚಿತ್ರದ ಪಾತ್ರ ಆ ರೀತಿ ಇದೆ. ಕುಟುಂಬದ ಪೂರ್ತಿ ಹೊಣೆ ಹೊತ್ತು, ಯಶಸ್ವಿಯಾಗುವ ಸೊಸೆಯ ಪಾತ್ರವನ್ನು ನಾನು ನಿರ್ವಹಿಸುತ್ತಿದ್ದೇನೆ ಎನ್ನುತ್ತಾರೆ ಛಾಯಾ. ಒಟ್ಟಿನಲ್ಲಿ ಕನ್ನಡದ ಕುಸುಮದ ಛಾಯೆ ಎಲ್ಲೆಡೆ ದರಿಸುತ್ತಿದೆ ಗುಡ್ ಲಕ್.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada