»   »  ನಿರ್ದೇಶಕ ಎಸ್ ನಾರಾಯಣ್ ಕೊಡವೆದ್ದರು!

ನಿರ್ದೇಶಕ ಎಸ್ ನಾರಾಯಣ್ ಕೊಡವೆದ್ದರು!

Posted By: *ಜಯಂತಿ
Subscribe to Filmibeat Kannada
Director S Nayaran
ನಾಗೇಂದ್ರ ಮಾಗಡಿಗೆ ಒಂದು ಸಿನಿಮಾ ಮಟ್ಟಿಗೆ ನಿರ್ದೇಶನದ ಅವಕಾಶ ಕಲ್ಪಿಸಿಕೊಟ್ಟಿದ್ದ ಎಸ್.ನಾರಾಯಣ್ ಮತ್ತೊಂದು ಚಿತ್ರವನ್ನು ಸುತ್ತಿಹಾಕಿದ್ದಾರೆ. ಹೆಸರು 'ಚೆಲ್ಲಿದರು ಸಂಪಿಗೆಯ'. ಚಿತ್ರದ ಧ್ವನಿಸುರುಳಿ ಹಾಗೂ ಸೀಡಿಗಳು ಮಾರುಕಟ್ಟೆಗೆ ಲಗ್ಗೆಇಟ್ಟು ವಾರಗಳೇ ಉರುಳಿವೆ. ಆದರೆ ಎಲ್ಲೂ ಚಿತ್ರದ ಸದ್ದಿಲ್ಲ. ಸುದ್ದಿಮಿತ್ರರ ಹಂಗು ಬೇಡವೇ ಬೇಡ ಅನ್ನುವ ನಾರಾಯಣ್ ತಮ್ಮ ಈ ಸಂಕಲ್ಪವನ್ನು ಇನ್ನೂ ಸಡಿಲಿಸಿಲ್ಲ.

ತೋಪು ನಾಯಕ ಪ್ರಶಾಂತ್, ಮಾತೆತ್ತಿದರೆ ಆಸ್ಟ್ರೇಲಿಯಾದಲ್ಲಿ ಬೆಳೆದ ಕಥೆ ಹೇಳುವ ಬಿಯಾಂಕಾ ದೇಸಾಯಿ, ಅವಕಾಶಕ್ಕೆ ಚಾತಕಪಕ್ಷಿಯಾಗಿದ್ದ ವಿಶಾಲ್ ಹಾಗೂ ಹೊಸ ಮುಖ ಶ್ರುತಿ ಈ ಚಿತ್ರದ ಎರಡು ಜೋಡಿ. ಸಿನಿಮಾ ಕಥೆ ಎಲ್ಲಿಯದ್ದು ಅನ್ನೋದು ಇನ್ನೂ ಗುಟ್ಟು.

ಸಂಗೀತ-ಸಾಹಿತ್ಯ-ನಿರ್ದೇಶನ-ನಿರ್ಮಾಣ ಸಕಲವೂ ನಾರಾಯಣರದ್ದೆ. ಪುತ್ರಮೋಹಕ್ಕೆ ಒಂದು ಹಾಗೂ ಹಾಸ್ಯದಾಹಕ್ಕೆ ಇನ್ನೊಂದು (ಚಿಕ್‌ಪೇಟೆ ಸಾಚಾಗಳು) ಚಿತ್ರ ಬಲಿಯಾದ ನಂತರವೂ ನಾರಾಯಣರ ತಿಜೋರಿ ಖಾಲಿಯಾಗಿಲ್ಲ ಅನ್ನೋದು ಅಚ್ಚರಿ. ಇಷ್ಟಕ್ಕೂ ನಾರಾಯಣರ ತಿಜೋರಿಯಲ್ಲಿರುವ ದುಡ್ಡು ಯಾರದ್ದು? ಕೇಳಿದರೆ, ನಾರಾಯಣ್ ಹಲ್ಲುತೋರಿಸಿ ಸುಮ್ಮನಾಗುತ್ತಾರಷ್ಟೆ!

ಸಂಪಿಗೆ ಪರಿಮಳದಲ್ಲಿ ಬಿಯಾಂಕ ದೇಸಾಯಿ
ಬಿನ್ನಾಣಗಿತ್ತಿ ಬಿಯಾಂಕಾ ದೇಸಾಯಿ ಚಿತ್ರಪಟ
ಚೆಲುವಿನ ಚಿಲಿಪಿಲಿ ಹಾಡಿದ ಕಲಾ ಸಾಮ್ರಾಟ್
ಕೇಬಲ್ ಪ್ರಶಸ್ತಿ:ಅತ್ಯುತ್ತಮ ಧಾರಾವಾಹಿ ಮುಕ್ತಮುಕ್ತ
ನಟಿ ನಿರ್ಮಲಾ ಜತೆ ಗುಂಡ್ರಗೋವಿ ಸತ್ಯನ ವಿವಾಹ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada