ಬೆಳ್ಳಿಮೋಡ ಛಾಯಾಗ್ರಾಹಕ ಆರ್‌ಎನ್ ಕೃಷ್ಣಪ್ರಸಾದ್ ನಿಧನ

ಆರ್.ನಾಗೇಂದ್ರರಾಯರ ನಿರ್ಮಾಣದ ರಾಷ್ಟ್ರಪ್ರಶಸ್ತಿ ವಿಜೇತ 'ಪ್ರೇಮದ ಪುತ್ರಿ' ಚಿತ್ರದ ಮೂಲಕ ಛಾಯಾಗ್ರಾಹಕರಾಗಿ ಕಾರ್ಯ ಆರಂಭಿಸಿದ ಇವರು ವಿಜಯನಗರದ ವೀರಪುತ್ರ, ಬೆಳ್ಳಿ ಮೋಡ, ಭಲೇ ಅದೃಷ್ಠವೋ ಅದೃಷ್ಠ ಮುಂತಾದ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ.
ಆರ್.ಎನ್.ಸುದರ್ಶನ್ ನಿರ್ಮಿಸಿ ನಟಿಸಿದ್ದ 'ನಗುವ ಹೂವು' ಚಿತ್ರಕ್ಕೆ ಛಾಯಾಗ್ರಹಣ ಮಾಡುವುದರೊಂದಿಗೆ ನಿರ್ದೇಶನವನ್ನು ಮಾಡಿದ್ದಾರೆ. ಈ ಚಿತ್ರಕ್ಕೂ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಕಳೆದ ವರ್ಷ ಜೀವಮಾನದ ಶ್ರೇಷ್ಠ ಸಾಧನೆಗಾಗಿ ರಾಜ್ಯ ಸರ್ಕಾರ ನೀಡುವ ಡಾ.ವಿಷ್ಣುವರ್ಧನ್ ಪ್ರಶಸ್ತಿ ಕೃಷ್ಣಪ್ರಸಾದ್ ಅವರಿಗೆ ಬಂದಿತ್ತು.
ಕಮಲ್ ಹಾಸನ್ ಅಭಿನಯದ ಮೈಕಲ್ ಮದನಕಾಮರಾಜನ್ ಚಿತ್ರದಲ್ಲಿ ಕಮಲ್ ಹಾಸನ್ ಅವರ ತಂದೆಯ ಪಾತ್ರದಲ್ಲಿ ಅಭಿನಯಿಸಿ ತಮಿಳು ಚಿತ್ರರಂಗದಲ್ಲೂ ಖ್ಯಾತರಾಗಿದ್ದರು. ಇತ್ತೀಚೆಗೆ ಬಿಡುಗಡೆಯಾದ ಪ್ರೇಮ್ ಅಭಿನಯದ 'ಗೌತಮ್' ಚಿತ್ರವನ್ನು ನಿರ್ದೇಶಿಸಿದ ರಾಜೀವ್ ಪ್ರಸಾದ್ ಅವರು ಕೃಷ್ಣಪ್ರಸಾದ್ ಅವರ ಪುತ್ರ. ಪತ್ನಿ ಉಷಾಪ್ರಸಾದ್, ಪುತ್ರ ರಾಜೀವ್ ಪ್ರಸಾದ್, ಪುತ್ರಿ ರತ್ನಮಾಲ ಅವರನ್ನು ಕೃಷ್ಣಪ್ರಸಾದ್ ಅಗಲಿದ್ದಾರೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











