For Quick Alerts
  ALLOW NOTIFICATIONS  
  For Daily Alerts

  ಕಂಠೀರವದಲ್ಲಿ ದರ್ಶನ್ 'ಬುಲ್ ಬುಲ್' ಗೆ ಕ್ಲಾಪ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಬುಲ್ ಬುಲ್' ಹೆಸರಿನ ಚಿತ್ರ ದರ್ಶನ್ ಹುಟ್ಟುಹಬ್ಬದ ದಿನವಾದ ಇಂದು (ಫೆಬ್ರವರಿ 16, 2012) ಸೆಟ್ಟೇರಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡುವುದರ ಮೂಲಕ ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಿದರು. ದರ್ಶನ್ ಮಿತ್ರ ಕಿಚ್ಚ ಸುದೀಪ್ ಚಿತ್ರಕ್ಕೆ ಶುಭ ಹಾರೈಸಿದರು. ಇಂದಿನಿಂದ ಚಿತ್ರೀಕರಣ ಪ್ರಾರಂಭ ಎಂದು ಚಿತ್ರತಂಡ ಘೋಷಿಸಿದೆ.

  ತೆಲುಗು ಚಿತ್ರ 'ಡಾರ್ಲಿಂಗ್', ಕನ್ನಡದಲ್ಲಿ 'ಬುಲ್ ಬುಲ್' ಎಂಬ ಹೆಸರಿನಲ್ಲಿ ರೀಮೇಕ್ ಆಗಿ ಬರಲಿದೆ. ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ ಈ ಚಿತ್ರವನ್ನು ಕನ್ನಡದಲ್ಲಿ ನಿರ್ದೇಶಿಸುತ್ತಿದ್ದಾರೆ ಎಂ ಡಿ ಶ್ರೀಧರ್. ಬುಲ್ ಬುಲ್ ಚಿತ್ರ ದರ್ಶನ್ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದ್ದು, ನಿರ್ಮಾಪಕನ ಸ್ಥಾನದಲ್ಲಿ ಸಹಜವಾಗಿ ದರ್ಶನ್ ತಮ್ಮ, ಸಾರಥಿ ನಿರ್ದೇಶಕ ದಿನಕರ್ ಕುಳಿತಿದ್ದಾರೆ. ವಿ ಹರಿಕೃಷ್ಣ, ಬುಲ್ ಬುಲ್ ಚಿತ್ರದ ಸಂಗೀತ ನಿರ್ದೇಶಕರು.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ರೆಬೆಲ್ ಸ್ಟಾರ್ ಅಂಬರೀಷ್ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ. ದರ್ಶನ್ ತಂದೆ ಪಾತ್ರದಲ್ಲಿ ಅಂಬರೀಷ್ ಕಾಣಿಸಿಕೊಳ್ಳಲಿದ್ದಾರೆ ಎಂಬುದು ದೊರೆತ ಮಾಹಿತಿ. ದರ್ಶನ್ ಹುಟ್ಟುಹಬ್ಬದ ಆಚರಣೆ ಜತೆ ಸಿನಿಮಾ ಮುಹೂರ್ತವನ್ನೂ ಮುಗಿಸಿಕೊಂಡು ದರ್ಶನ್ ಆಪ್ತರು ತೃಪ್ತಿಯಿಂದ ಬೀಗುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಬುಲ್ ಬುಲ್ ಚಿತ್ರಕ್ಕೆ ಮುಹೂರ್ತ ನಡೆದಿದ್ದು ಇಡೀ ಸ್ಟುಡಿಯೋ ಆವರಣ ದರ್ಶನ್ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರಿಂದ ತುಂಬಿಹೋಗಿದೆ. (ಒನ್ ಇಂಡಿಯಾ ಕನ್ನಡ)

  English summary
  Challenging Star Darshan movie Bulbul launched today. Crazy Star Ravichandran claped for this and Kichcha Sudeep wished for Success. M D Sridar directs this and Dinakar Tugudeep produses this movie. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X