»   »  ಆಟೋ ಚಿತ್ರ ಯಶಸ್ವಿ; ಸ್ವಯಂ ರಕ್ತದಾನ

ಆಟೋ ಚಿತ್ರ ಯಶಸ್ವಿ; ಸ್ವಯಂ ರಕ್ತದಾನ

Subscribe to Filmibeat Kannada

'ಆಟೋ 'ಸಿನಿಮಾ ಯಶಸ್ವಿ 50 ದಿನ ಪೂರೈಸಿದ ಹಿನ್ನಲೆಯಲ್ಲಿ ಚಿತ್ರತಂಡದಿಂದ ಸ್ವಯಂ ರಕ್ತದಾನ ಶಿಬಿರ ಸೋಮವಾರ ನಡೆಯಿತು. ಚಿತ್ರದ ನಿರ್ಮಾಪಕ ಮಹೇಂದ್ರ ಮುನ್ನೋತ್ ನೇತೃತ್ವದಲ್ಲಿ ಹಾಗೂ ಭಾರತ್ ವಿಕಾಸ್ ಪರಿಷತ್ ಸಹಯೋಗದಲ್ಲಿ ಚಾಮರಾಜಪೇಟೆಯ ರಾಷ್ಟ್ರೋತ್ಪನ್ನ ರಕ್ತನಿಧಿ ಕೇಂದ್ರದಲ್ಲಿ ಈ ಶಿಬಿರ ನಡೆಯಿತು.

ಚಿತ್ರದ ನಾಯಕ ಸತ್ಯ ಸೇರಿದಂತೆ ನಿರ್ಮಾಪಕರು ಮತ್ತು ಚಿತ್ರತಂಡ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು. ಇವರು ರಕ್ತದಾನ ಮಾಡುವ ಮೂಲಕ ಮಾನವ ಜೀವದ ಸಂಜೀವಿನಿಯಾದ ರಕ್ತ ಶೇಖರಣೆಗೆ ಮುಂದಾದರು. ಈ ಮೂಲಕ ಹೀಗೂ ಅರ್ಥಪೂರ್ಣವಾಗಿ ಐವತ್ತು ದಿನಗಳ ಸಂಭ್ರಮವನ್ನು ಆಚರಿಸಬಹುದು ಎಂಬುದನ್ನು ಚಿತ್ರತಂಡ ಸಾಬೀತು ಪಡಿಸಿತು.

ಚಿತ್ರ 50 ದಿನಗಳ ಯಶಸ್ವಿ ಪ್ರದರ್ಶನ ಕಂಡ ಸಂತೋಷದಲ್ಲಿ ರಕ್ತದಾನ ಮಾಡುವ ಮೂಲಕ ತೊಂದರೆಗೊಳಗಾದವರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ನಿರ್ಮಾಪಕರು ಹೇಳಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada