For Quick Alerts
  ALLOW NOTIFICATIONS  
  For Daily Alerts

  ಮಲೆ ಮಾದೇಶ್ವರನ ಸನ್ನಿಧಿಯಲ್ಲಿ ಕರಿ ಚಿರತೆ

  By Super
  |

  ಮುಗ್ಧ ಶಿವಲಿಂಗು ಪಾತ್ರದಿಂದ ಕನ್ನಡಿಗರ ಮನದಲ್ಲಿ ನೆಲೆಯೂರಿದ್ದ ವಿಜಯ್ ಈಗ ದುಷ್ಟರನ್ನು ಬೇಟೆಯಾಡುವ 'ಕರಿ ಚಿರತೆ'ಯಾಗಿ ಸಾಹಸ ಪ್ರಿಯರ ಮನ ತಣಿಸಲು ಅಣಿಯಾಗುತ್ತಿದ್ದಾರೆ. ಮೋಹನ ಕುಮಾರ.ಎನ್. ಅರ್ಪಿಸಿ ಮೋಹನ ಪ್ರೊಡಕ್ಷನ್ಸ್ ಲಾಛನದಲ್ಲಿ ಕೃಷ್ಣಯ್ಯ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗಜ ಹಾಗೂ ಪ್ರೀತ್ಸೆ ಪ್ರೀತ್ಸೆ ನಿರ್ದೇಶಿಸಿದ್ದ ಕೆ. ಮಾದೇಶ್ ಕ್ಯಾಪ್ಟನ್ ಆಗಿದ್ದಾರೆ.

  ಜೂನ್ 19 ರಿಂದ ಈ ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದು, ಕಳೆದ ವಾರ ಮಲೆ ಮಾದೇಶ್ವರ ಸ್ವಾಮಿ ಬೆಟ್ಟದಲ್ಲಿ ಹಾಡೊಂದನ್ನು 4 ದಿನಗಳ ಕಾಲ ಚಿತ್ರೀಕರಿಸಲಾಯಿತು. ಮಾದೇಶ್ವರ ಸ್ವಾಮಿಯನ್ನು ನಾಯಕ ವಿಜಯ್ ವೀರಾವೇಶದಿಂದ ಹಾಡಿ ಹೊಗಳುವ ಈ ಹಾಡಿನ ಚಿತ್ರೀಕರಣದಲ್ಲಿ ಡೋಲು, ಡೊಳ್ಳು ಕುಣಿತ, ವೀರಗಾಸೆ ತಾಳ, ಮದ್ದಲೆ, ಕಲಾವಿದರ ಜೊತೆಗೆ 100 ಜನ ನೃತ್ಯ ಕಲಾವಿದರೂ ಭಾಗವಹಿಸಿದರು.

  ಪರಿಚಯ ಚಿತ್ರದ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದ ರಾಮು ಈ ಹಾಡಿಗೆ ನೃತ್ಯ ನಿರ್ದೇಶಕರಾಗಿದ್ದಾರೆ. ವಿಜಯ ಅಭಿನಯಿಸಿದ್ದಾರೆ. ಸಾಧುಕೋಕಿಲ ಅವರ ಸಂಗೀತ ಸಂಯೋಜನೆ, ಎಂ.ಆರ್. ಸೀನು ಅವರ ಛಾಯಾಗ್ರಹಣ, ಪಳನಿರಾಜ್‌ರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  English summary
  Film Kari Chirate

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X