»   »  ಗೋಲ್ಡನ್ ಸ್ಟಾರ್ ಗಣೇಶ್; ಚಾಪ್ಲಿನ್ ಆದಾಗ

ಗೋಲ್ಡನ್ ಸ್ಟಾರ್ ಗಣೇಶ್; ಚಾಪ್ಲಿನ್ ಆದಾಗ

Subscribe to Filmibeat Kannada
Ganesh is a great fan of charlie Chaplin
ಬಾಲ್ಯದಿಂದಲೂ ನನಗೆ ಚಾರ್ಲಿ ಚಾಪ್ಲಿನ್ ನಟನೆ ಎಂದರೆ ಇಷ್ಟ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಹೇಳಿಕೊಂಡಿದ್ದಾರೆ. ನನ್ನ ಬಳಿ ಚಾಪ್ಲಿನ್ ನಟನೆಯ ಬಹಳಷ್ಟು ಡಿವಿಡಿಗಳ ಸಂಗ್ರಹವೇ ಇದೆ. ಚಾಪ್ಲಿನ್ ರ ಆಂಗಿಕ ಅಭಿನಯ, ನಡಿಗೆಯ ಶೈಲಿ, ಉಡುಗೆ ತೊಡುಗೆ, ಮೀಸೆ ಮತ್ತು ಅವರಿಗಾಗಿಯೇ ತಯಾರಿಸಿದ ಹ್ಯಾಟ್... ಅವರೊಬ್ಬ ಅಪ್ರತಿಮ ಹಾಸ್ಯ ಕಲಾವಿದ ಎನ್ನುತ್ತಾರೆ ಗಣೇಶ್.

ಅರಮನೆ ಚಿತ್ರದ ಹಾಡೊಂದರಲ್ಲಿ ಚಾಪ್ಲಿನ್ ಆಗಿ ಗಣೇಶ್ ನಟಿಸಿದ್ದರು. ಚಾಪ್ಲಿನ್ ನಟನೆಯ ದೃಶ್ಯಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದೆ. ಹಾಡಿನ ಸನ್ನಿವೇಶಗಳಲ್ಲಿ ಚಾಪ್ಲಿನ್ ನಟನೆ ಮಾಡಬೇಕಾದರೆ ಬಹಳಷ್ಟು ಖುಷಿ ಪಟ್ಟಿದ್ದೇನೆ. ಇಂದಿಗೂ ಸಹ ನನಗೆ ಬಿಡುವು ಸಿಕ್ಕರೆ ಚಾಪ್ಲಿನ್ ಚಿತ್ರದ ಡಿವಿಡಿಗಳನ್ನು ಹಾಕಿಕೊಂಡು ನೋಡುತ್ತೇನೆ ಎಂದು ಗಣೇಶ್ ಚಾಪ್ಲಿನ್ ಬಗೆಗಿನ ತಮ್ಮ ಅಭಿಮಾನವನ್ನು ತೋಡಿಕೊಳ್ಳುತ್ತಾರೆ.

ಚಾಪ್ಲಿನ್ ರ ಜೀವನ ಸ್ವಾರಸ್ಯವನ್ನು ಅರಮನೆ ಚಿತ್ರದಲ್ಲಿ ಚಿತ್ರಸಾಹಿತಿ ಕವಿರಾಜ್ ಒಂದೇ ಸಾಲಿನಲ್ಲಿ ಹಿಡಿದಿಟ್ಟಿದ್ದರು. ''ನೊಂದರೂ ಬೆಂದರೂ ಚಾರ್ಲಿ ಚಾಪ್ಲಿನ್ ಲೋಕವನ್ನೇ ನಗಿಸಲಿಲ್ಲವೇ...''ಎಂದು ಆ ಹಾಡು ಸಾಗುತ್ತದೆ. ''ಚಾಪ್ಲಿನ್ ರ ಬಹಳಷ್ಟು ಚಿತ್ರಗಳನ್ನು ನಾನು ನೋಡಿಲ್ಲ. ಜೀವನದಲ್ಲಿ ಬಹಳಷ್ಟು ಏರಿಳಿತಗಳನ್ನು ಕಂಡ ಮಹಾನ್ ಕಲಾವಿದ. ಕಷ್ಟದಲ್ಲಿದ್ದರೂ ಇಡೀ ಜಗತ್ತನ್ನು ತನ್ನ ಅಪ್ರತಿಮ ನಟನೆಯಿಂದ ನಕ್ಕು ನಗಿಸಿದ ನಟ'' ಎನ್ನುತ್ತಾರೆ ಕವಿರಾಜ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಒತ್ತಿನೆಣಿಯಲ್ಲಿ ಚಾಪ್ಲಿನ್ ಪ್ರತಿಮೆ ನಿರ್ಮಾಣಕ್ಕೆ ಅಡ್ಡಿ
ಚಿತ್ರವಿಮರ್ಶೆ: ಅರಮನೆ ಹಾಗೇ ಸುಮ್ಮನೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada