»   » ಕನ್ನಡಕ್ಕೆ ಮಾಯಾಂಗನೆ ಕಾಜಲ್ ಅಗರವಾಲ್

ಕನ್ನಡಕ್ಕೆ ಮಾಯಾಂಗನೆ ಕಾಜಲ್ ಅಗರವಾಲ್

Posted By:
Subscribe to Filmibeat Kannada

ದಕ್ಷಿಣ ಭಾರತದಲ್ಲಿ ಸದ್ಯಕ್ಕೆ ಬಲು ಬೇಡಿಕೆಯಲ್ಲಿರುವ ನಟಿಯಲ್ಲಿ ಕಾಜಲ್ ಅವರವಾಲ್ ಸಹ ಒಬ್ಬರು. ಆಕರ್ಷಕ ಮೈಮಾಟ, ಚಿಗರೆ ಕಂಗಳ ಚೆಲುವೆ ಕಾಜಲ್ ಅಗರವಾಲ್ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ತೆಲುಗು ಹಾಗೂ ತಮಿಳಿನಲ್ಲಿ ಪ್ರಕಾಶಿಸುತ್ತಿರುವ ಕಾಜಲ್ ಇನ್ನು ಮುಂದೆ ಕನ್ನಡದಲ್ಲಿ ಮಿಂಚಲಿದ್ದಾರೆ.

ಕಾಜಲ್ ಅಗರವಾಲ್ ರನ್ನು ಕನ್ನಡಕ್ಕೆ ಕರೆತರುತ್ತಿರುವವರು ನಿರ್ದೇಶಕ ರಘು ಹಾಸನ್. ಅವರು ಚೊಚ್ಚಲ ನಿರ್ದೇಶನದ ಚಿತ್ರ 'ತಥಾಸ್ತು' ಈಗಾಗಲೆ ಆರಂಭವಾಗಿದೆ. ಈ ಚಿತ್ರದಲ್ಲಿ ನಟಿಸಲು ಕಾಜಲ್ ಒಪ್ಪಿರುವುದಾಗಿ ತಿಳಿಸಿದ್ದಾರೆ. ಶೀಘ್ರದಲ್ಲೆ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ರಘು ಹಾಸನ್ ತಿಳಿಸಿದ್ದಾರೆ.

ಕಾಜಲ್ ಅಗರವಾಲ್ ಅಥವಾ ಸೋನಂ ಕಪೂರ್ ಅವರನ್ನು ಕರೆತರಬೇಕೆಂದುಕೊಂಡಿದ್ದೆವು. ಕಾಜಲ್ ಅವರನ್ನು ಭೇಟಿಯಾದಾಗ ಆಕೆ ತಮ್ಮ ಚಿತ್ರದಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ. ಎಲ್ಲವೂ ಒಂದು ಹಂತಕ್ಕೆ ಬಂದ ಬಳಿಕ ಅಧಿಕೃತವಾಗಿ ಈ ವಿಷಯವನ್ನು ಪ್ರಕಟಿಸುವುದಾಗಿ ರಘು ಹೇಳಿದ್ದಾರೆ.

ಅಂದಹಾಗೆ ಈ ಚಿತ್ರಕ್ಕೆ ನಾಯಕ ನಟ ಚಿರಾಗ್. ಅಣಜಿ ನಾಗರಾಜ್ ನಿರ್ಮಿಸುತ್ತಿರುವ ತಥಾಸ್ತು ಚಿತ್ರ ಜುಲೈ 9ರಂದು ಚಿತ್ರ ಸೆಟ್ಟೇರಿದೆ. ಸದ್ಯಕ್ಕೆ ಕಾಜಲ್ ಅಗರವಾಲ್ ಮೂರು ತೆಲುಗು ಹಾಗೂ ಎರಡು ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಈ ಮಾಯಾಂಗನೆಯ ಜಾದೂ ಹೇಗಿರುತ್ತದೆ ಎಂದು ಕಾದು ನೋಡಬೇಕು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada