»   » ಕನ್ನಡ ಚಿತ್ರರಂಗದ ದೊಡ್ಡಣ್ಣನಿಗೆ ಅರುವತ್ತು

ಕನ್ನಡ ಚಿತ್ರರಂಗದ ದೊಡ್ಡಣ್ಣನಿಗೆ ಅರುವತ್ತು

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಮತ್ತು ಹಾಸ್ಯ ನಟ ದೊಡ್ಡಣ್ಣ' ಅರುವತ್ತನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 300ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ದೊಡ್ಡಣ್ಣ ಶಿವಮೊಗ್ಗ್ಗ ಬಳಿಯ ತಮ್ಮ ಹುಟ್ಟೂರಿನಲ್ಲಿ ನಂತರ ಬೆಂಗಳೂರು ವೆಸ್ಟ್ ಆಫ್ ಕಾರ್ಡ್ ರಸ್ತೆಯ ಇಸ್ಕಾನ್ ಮಂದಿರದಲ್ಲಿ ಭಾನುವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ದೊಡ್ಡಣ್ಣ ಮತ್ತವರ ಪತ್ನಿ ಶಾಂತಮ್ಮ ಪರಸ್ಪರ ಹೂಮಾಲೆಗಳನ್ನು ಬದಲಾಯಿಸಿಕೊಳ್ಳುತ್ತಿದ್ದರೆ ಸಾಂಪ್ರದಾಯಿಕ ಹಿನ್ನೆಲೆ ಸಂಗೀತ ಇದಕ್ಕೆ ಜತೆಯಾಯಿತು. ದೊಡ್ಡಣ್ಣ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟು ಮೂರು ದಶಕಗಳೇ ಕಳೆದು ಹೋಗಿವೆ. ಈ ಸಂದರ್ಭದಲ್ಲಿ ಕೋಡಿ ಮಠ ದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ದೊಡ್ಡಣ್ಣ ಅವರನ್ನು ಆಶೀರ್ವದಿಸಿದರು.

ಕನ್ನಡ ಚಿತ್ರರಂಗದ ನಿರ್ಮಾಪಕರು, ಕಲಾವಿದರು, ನಿರ್ದೇಶಕರು ದೊಡ್ಡಣ್ಣ ಅವರ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕೇಕ್ ಕತ್ತರಿಸಿ ದೊಡ್ಡಣ್ಣ ಅವರು ತಮ್ಮ ಹುಟ್ಟುಹಬ್ಬವನ್ನು ಸರಳ ಸುಂದರವಾಗಿ ಆಚರಿಸಿಕೊಂಡರು. ಮಂಗಳ ವಾದ್ಯಗಳು ದೊಡ್ಡಣ್ಣ ಅವರ ಸಂಭ್ರಮಕ್ಕೆ ಜತೆಯಾಗಿದ್ದು ವಿಶೇಷವಾಗಿತ್ತು.

ಅಂಬರೀಷ್, ವಿ ರವಿಚಂದ್ರನ್, ಹಂಸಲೇಖ, ರಾಕ್ ಲೈನ್ ವೆಂಕಟೇಶ್, ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಜಗ್ಗೇಶ್, ಉಪೇಂದ್ರ ಮತ್ತು ಪ್ರಿಯಾಂಕ, ಈ ಕೃಷ್ಣಪ್ಪ, ಕೆಎಸ್ ಎಲ್ ಸ್ವಾಮಿ, ಚಿಂದೋಡಿ ಲೀಲಾ, ತಲ್ಲಂ ನಂಜುಂಡ ಶೆಟ್ಟಿ, ದ್ವಾರಕೀಶ್, ಎಸ್ ನಾರಾಯಣ್, ಕಾಶಿನಾಥ್, ವಿ ಮನೋಹರ್, ಕೆಸಿಎನ್ ಚಂದ್ರಶೇಖರ್, ಸಾ ರಾ ಗೋವಿಂದು, ಶಿವರಾಮ್, ಸುಂದರರಾಜ್, ಗಿರಿಜಾ ಲೋಕೇಶ್, ಹೇಮ ಚೌದರಿ, ಸುಧಾರಾಣಿ, ಮೇಘನಾ, ಸುಮಿತ್ರಾ, ಫಣಿ ರಾಮಚಂದ್ರ, ಪದ್ಮ ಕುಮುಟಾ, ಗುರುದತ್ ಮುಂತಾದವರು ಆಗಮಿಸಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada