»   » ಯಡ್ಡಿ ಶೋಭಾ ಸಂಬಂಧ ಆಯ್ತು ಭ್ರಷ್ಟಾಚಾರಕ್ಕೆ ಆಹಾರ

ಯಡ್ಡಿ ಶೋಭಾ ಸಂಬಂಧ ಆಯ್ತು ಭ್ರಷ್ಟಾಚಾರಕ್ಕೆ ಆಹಾರ

Posted By:
Subscribe to Filmibeat Kannada
Yeddyurappa and Shobha story in Bhrashtachara movie
ಭ್ರಷ್ಟಾಚಾರ, ರಾಜಕೀಯ ವಿಡಂಬನೆ ಕುರಿತ ಚಿತ್ರಗಳು ಕನ್ನಡದಲ್ಲಿ ಅಪರೂಪ. ಅಲ್ಲಲ್ಲಿ ಒಂದೆರಡು ಕಾಣಿಸಿಕೊಂಡರೂ ನೇರವಾಗಿ ಬೊಟ್ಟು ಮಾಡಿ ತೋರಿಸಿ ಎಲ್ಲವನ್ನು ರಿಯಲ್ ಆಗಿ ತೋರಿಸುವ ಧೈರ್ಯ ಮಾಡಿದವರು ಕಮ್ಮಿ.


ಆದರೆ, ನಿರ್ದೇಶಕ ಸಾಯಿಪ್ರಕಾಶ್ ಅವರು ಜೈಲುಹಕ್ಕಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಹಾಲಿ ಇಂಧನ ಮಂತ್ರಿ ಶೋಭಾ ಕರಂದ್ಲಾಜೆ ಅವರನ್ನು ಹೋಲುವಂತಹ ಎರಡು ವ್ಯಕ್ತಿಗಳನ್ನು ತಮ್ಮ ಚಿತ್ರದಲ್ಲಿ ಪರಿಚಯಿಸುತ್ತಿದ್ದಾರಂತೆ.

ಇದೇ ಅಸಲಿಗೆ ಯಡಿಯೂರಪ್ಪ ಹಾಗೂ ಶೋಭಾ ಅವರ ನಡುವಿನ ಕಥೆಯೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಅದರೆ, ಓಂ ಸಾಯಿಪ್ರಕಾಶ್ ಅವರ ಹೊಸ ಚಿತ್ರ 'ಭ್ರಷ್ಟಾಚಾರ' ದಲ್ಲಿ ಗಣಿಗಾರಿಕೆ, ರಾಜಕೀಯ ತಂತ್ರಗಾರಿಕೆಯೇ ಪ್ರಧಾನ ಪಾತ್ರವಂತೆ.

ನಿರ್ಮಾಪಕ ನರ್ಗೀಸ್ ಬಾಬು ಅವರ ಪುತ್ರ ಕಮ್ಮರ್ ಹೆಸರಿನಲ್ಲಿ ರೆಹಾನ್ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ತಯಾರಿಸುತ್ತಿರುವ ಈ ಚಿತ್ರ ಭ್ರಷ್ಟಾಚಾರ ಎಲ್ಲ ರೀತಿಉಯ ಮುಖಗಳನ್ನು ತೋರಿಸಲಿದೆಯಂತೆ.

ನಾಗರೀಕ ಪ್ರಜ್ಞೆ ಹೆಚ್ಚಿಸಿ, ಜನತೆಗೆ ಒಳ್ಳೆ ಸಂದೇಶ ನೀಡಲಿದೆ ಎಂದು ಚಿತ್ರತಂಡ ಹೇಳುತ್ತಿದೆ.

ಕಿಶೋರ್ ಹಾಗೂ ಭಾವನ ರಾವ್ ಅವರು ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಆದಿ ಲೋಕೇಶ್ ಹಾಗೂ ಇನ್ನಿತರರು ತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಏನಾದರೂ ಸಂಚಲನ ಮೂಡಿಸುತ್ತದೆಯೋ ಅಥವಾ ಇದು ಬರೀ ಪ್ರಚಾರಕ್ಕಾಗಿ ಮಾಡಿರುವ ಗಿಮಕ್ ಏನೋ ಕಾದು ನೋಡಬೇಕಿದೆ.

English summary
Director Om Saiprakash has taken dare step to showcase alleged affair between former cm Yeddyurappa and Shobha Karandlaje in his latest flick Bhrashtachara. Movie revolves around corruption with Kishore and Bhavana Rao.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada