»   »  ಕನ್ನಡದ ಕಿರಣ್‌ಬೇಡಿಗೆ ಕ್ಲೀನ್ ಸೆನ್ಸಾರ್

ಕನ್ನಡದ ಕಿರಣ್‌ಬೇಡಿಗೆ ಕ್ಲೀನ್ ಸೆನ್ಸಾರ್

Subscribe to Filmibeat Kannada
Kannadada Kiran Bedi clears censor
ಪ್ರತಿಷ್ಟಿತ ರಾಮು ಎಂಟರ್ ಪ್ರೈಸಸ್ ಅವರ 25ನೇ ಕೊಡುಗೆ 'ಕನ್ನಡದ ಕಿರಣ್‌ಬೇಡಿ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ ಯು ಅರ್ಹತಾಪತ್ರವನ್ನು ನೀಡಿದೆ. ಮಾಸಾಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ.

ಪೊಲೀಸ್ ಪಾತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಜನಪ್ರಿಯರಾಗಿದ್ದ ಮಾಲಾಶ್ರೀ 'ಕನ್ನಡದ ಕಿರಣ್‌ಬೇಡಿ' ಚಿತ್ರದಲ್ಲೂ ಪೊಲೀಸ್ ಪಾತ್ರ ನಿರ್ವಹಿಸಿದ್ದಾರೆ. ಆದರ್ಶ ವ್ಯಕ್ತಿಗಳ ಹೆಸರನ್ನು ತಮ್ಮ ಮಕ್ಕಳಿಗೆ ಇಡುವುದು ವಾಡಿಕೆ. ಅದೇರೀತಿ ನಮ್ಮ ಚಿತ್ರದಲ್ಲೂ ನಿಷ್ಠಾವಂತ ಪೊಲೀಸ್ ಅಧಿಕಾರಿ ಕಿರಣ್‌ಬೇಡಿ ಅವರ ವೃತ್ತಿಜೀವನದಿಂದ ಪ್ರೇರಿತಳಾದ ಒಬ್ಬ ಪೊಲೀಸ್ ಅಧಿಕಾರಿ ತನ್ನ ಹೆಸರನ್ನು ಕಿರಣ್‌ಬೇಡಿ ಎಂದು ನಾಮಕರಣ ಮಾಡಿಕೊಂಡಿರುತ್ತಾಳೆ. ಇದು ಒಂದು ಪಾತ್ರದ ಹೆಸರು ಎಂದು ನಿರ್ಮಾಪಕರು ಪಾತ್ರದ ವಿವರಣೆ ನೀಡಿದ್ದಾರೆ. ಈ ಪಾತ್ರವನ್ನು ನಿರ್ವಹಿಸುವುದ್ದಕ್ಕಾಗಿ ಮಾಲಾಶ್ರೀ ಪೂರ್ವದಲ್ಲಿ ಸಾಕಷ್ಟು ತಯಾರಿ ನಡೆಸಿ ಸಾಹಸ ಸನ್ನಿವೇಶಗಳಲ್ಲಿ ನೈಜವಾಗಿ ಪಾಲ್ಗೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕರೆಂದೇ ಕರೆಯಲ್ಪಡುವ ರಾಮು ಅವರು ನಿರ್ಮಿಸಿರುವ 'ಕನ್ನಡದ ಕಿರಣ್‌ಬೇಡಿ ಚಿತ್ರವನ್ನು ಓಂಪ್ರಕಾಶ್‌ರಾವ್ ನಿರ್ದೇಶಿಸಿದ್ದಾರೆ. ಕೆ.ಎಂ.ವಿಷ್ಣುವರ್ಧನ್ ಛಾಯಾಗ್ರಹಣ, ರಂಗನಾಥ್ ಸಂಭಾಷಣೆ, ಹಂಸಲೇಖ ಸಾಹಿತ್ಯ_ಸಂಗೀತ, ಪಳನಿರಾಜ್ ಸಾಹಸ, ಪ್ರದೀಪ್‌ಅಂಟೋನಿ ನೃತ್ಯ, ಸರಿಗಮವಿಜಿ ಸಹನಿರ್ದೇಶನ, ಇಸ್ಮಾಯಿಲ್, ಕುಮಾರ್ ಕಲೆ, ಭರತ್, ಸೋಮು ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಮಾಲಾಶ್ರೀ, ಶ್ರೀನಿವಾಸಮೂರ್ತಿ, ಆಶೀಷ್ ವಿದ್ಯಾರ್ಥಿ, ರಂಗಾಯಣ ರಘು, ಸಾಧು ಕೋಕಿಲಾ, ಬುಲೆಟ್ ಪ್ರಕಾಶ್, ಜಿ.ವಿ.ಮಹೇಶ್, ಧರ್ಮ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಯುಗಾದಿಗೆ ಬರುತ್ತಿದ್ದಾರೆ ಕನ್ನಡದ ಕಿರಣ್ ಬೇಡಿ
ಕನ್ನಡ ಚಿತ್ರರಂಗದ ದುಸ್ಥಿತಿಯ ಬಗ್ಗೆ ರಾಮು ವಿಷಾದ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada