For Quick Alerts
  ALLOW NOTIFICATIONS  
  For Daily Alerts

  ಗೋಲ್‌ಮಾಲ್ ಗಾಯಿತ್ರಿಯಾದ ದಿನೇಶ್ ಬಾಬು ಚಿತ್ರ

  By Rajendra
  |

  ಸರಣಿ ಮದುವೆಗಳನ್ನು ಮಾಡಿ ಯಶಸ್ವಿಯಾಗಿರುವ ನಿರ್ದೇಶಕ ದಿನೇಶ್ ಬಾಬು. ಈಗ ಅವರು ಮತ್ತೊಂದು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆ ಚಿತ್ರಕ್ಕೆ 'ಲಿಮಿಟ್' ಎಂದು ಹೆಸರಿಟ್ಟು ಇನ್ನೇನು ತೆರೆಗೆ ಅಪ್ಪಳಿಸಲು ಸಿದ್ಧವಾಗಿರುವುದು ಗೊತ್ತೆ ಇದೆ.

  ಆದರೆ ಅಸಲಿ ವಿಷಯ ಏನೆಂದರೆ ಈ ಚಿತ್ರದ ಶೀರ್ಷಿಕೆ ಬಾಬು ಬದಲಾಯಿಸಿದ್ದಾರೆ. ಚಿತ್ರಕ್ಕೆ 'ಗೋಲ್‌ಮಾಲ್' ಎಂದು ಹೊಸದಾಗಿ ನಾಮಕರಣ ಮಾಡಲಾಗಿದೆ. ದಿನೇಶ್ ಬಾಬು ನಿರ್ದೇಶನದಲ್ಲಿ ಮೂಡಿಬರುತ್ತಿರುವ ನೂರನೇ ಚಿತ್ರವಿದು. ಉಮೇಶ್‌ಬಣಕಾರ್ ಹಾಗೂ ಅನಿಲ್ ಪಿ ಮೆಣಸಿನಕಾಯಿ ನಿರ್ಮಿಸಿರುವ ಚಿತ್ರ ಇದಾಗಿದೆ.

  ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ದಿನೇಶ್‌ಬಾಬು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಹಿರಿಯ ಕಲಾವಿದರಾದ ಅನಂತ್‌ನಾಗ್ ಹಾಗೂ ಊರ್ವಶಿ ಅಭಿನಯಿಸಿದ್ದಾರೆ.

  ಖ್ಯಾತ ನಿರ್ದೇಶಕ ಬಿ.ರಾಮಮೂರ್ತಿ ಅವರ ಪುತ್ರ ಅಕ್ಷಯ್ ಈ ಚಿತ್ರದ ನಾಯಕ. 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಪ್' ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡಿದ್ದ ನಯನಾ ಈ ಚಿತ್ರದ ನಾಯಕಿ. ಶ್ರೀನಿವಾಸಮೂರ್ತಿ, ರಾಜುತಾಳಿಕೋಟೆ, ತಾರಾ, ಬುಲೆಟ್ ಪ್ರಕಾಶ್, ಸುಂದರರಾಜ್, ರಾಮಕೃಷ್ಣ, ರವೀಂದ್ರ ಮುಂತಾದವರು ಈ ಚಿತ್ರದಲ್ಲಿ ನಟಿಸಿರುವ ಕಲಾವಿದರು.

  ಚಿತ್ರದಲ್ಲಿ ಒಂದೇ ಒಂದು ಹಾಡಿದ್ದು ಗಂಧರ್ವರ ಸಂಗೀತ ನೀಡಿದ್ದಾರೆ. ಸುರೇಶ್ ಭೈರಸಂದ್ರ ಛಾಯಾಗ್ರಹಣ, ಬಾಬುಖಾನ್ ಕಲಾ ನಿರ್ದೇಶನ ಹಾಗೂ ಕಬಾಳಿ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. (ಒನ್‌ಇಂಡಿಯಾ ಕನ್ನಡ)

  English summary
  Dinesh Baboo directional 100th movie Limit titled has been changed to Golmaal Gayatri. 'Limit' producer Umesh Banakar is introducing Nayana the winner of 'Pyate Hudgi Halli Life' reality show winner and veteran director B Ramamurthy son Akshay is paired with Nayana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X