For Quick Alerts
  ALLOW NOTIFICATIONS  
  For Daily Alerts

  ಸೆನ್ಸಾರ್‌ನಲ್ಲಿ ಮೈಲಾರಿ ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗಿದ್ದಾನೆ!

  By Rajendra
  |

  ಸೆಂಚುರಿ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮೈಲಾರಿ' ಸೆನ್ಸಾರ್‌ನಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗಿದ್ದಾನೆ. ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಮೈಲಾರಿ'ಗೆ ಯು/ಎ ಪ್ರಮಾಣಪತ್ರ ಕೊಟ್ಟು ಬೆನ್ನುತಟ್ಟಿದೆ. ಡಿಸೆಂಬರ್ 24ರಂದು 'ಮೈಲಾರಿ' ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದ್ದಾನೆ.

  "ಚಿತ್ರದ ಬಗ್ಗೆ ನಾನೇನು ಹೆಚ್ಚಿಗೆ ಹೇಳುವುದಿಲ್ಲ. ಚಿತ್ರಮಂದಿರಕ್ಕೆ ಬಂದು ಎಲ್ಲರೂ 'ಮೈಲಾರಿ'ಯನ್ನು ನೋಡಿ ಆನಂದಿಸಿ. ನಮ್ಮ 'ಮೈಲಾರಿ' ಚಿತ್ರಕ್ಕೆ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಫಸ್ಟ್ ಕ್ಲಾಸಲ್ಲಿ ಪಾಸಾಗಿದ್ದಾನೆ" ಎಂದು ಪ್ರತಿಕ್ರಿಯಿಸಿದ್ದಾರೆ ಚಿತ್ರದ ನಿರ್ದೇಶಕ ಆರ್ ಚಂದ್ರು.

  "ರಾಜ್ಯದ ನಾನಾ ಮೂಲೆಗಳಿಂದ ಮೈಲಾರಿಯನ್ನು ನೋಡಲು ಪ್ರೇಕ್ಷಕರು ಕಾತುರದಿಂದಿದ್ದಾರೆ. ಡಿ.17ಕ್ಕೆ ಬಿಡುಗಡೆಯಾಗಬೇಕಿದ್ದ ಚಿತ್ರ ಸೆನ್ಸಾರ್ ಆಗದ ಕಾರಣ ಒಂದು ವಾರ ತಡವಾಗಿ ತೆರೆಗೆ ಬರುತ್ತಿದ್ದಾನೆ. ಚಿತ್ರದ ಪ್ರಚಾರ ಕಾರ್ಯವೂ ಜೋರಾಗಿದೆ" ಎಂದಿದ್ದಾರೆ ನಿರ್ಮಾಪಕರಲ್ಲಿ ಒಬ್ಬರಾದ ಕೆ ಪಿ ಶ್ರೀಕಾಂತ್.

  English summary
  Century Hero Shivarajkumar latest movie Mylari gets U/A certificate from regional censor board. The movie is slated for release on 24th December. This is Shivarajkumar 99th movie in Kannada. Sada, Sanjana, Ravi Kale and Raju Talikote lead movie is directed by R Chandru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X