»   »  ಸೆನ್ಸಾರ್ ಗೆ ರೆಡಿಯಾದ್ರು ನಂ ಯಜಮಾನ್ರು

ಸೆನ್ಸಾರ್ ಗೆ ರೆಡಿಯಾದ್ರು ನಂ ಯಜಮಾನ್ರು

Subscribe to Filmibeat Kannada
Nam Yajamanru ready for censor
ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಖ್ಯಾತ ನಿರ್ದೇಶಕ ನಾಗಾಭರಣ ಸಂಗಮದ 'ನಂಯಜಮಾನ್ರು' ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳನ್ನು ಪೂರೈಸಿ ಬಿಡುಗಡೆಗೆ ಸಿದ್ದವಾಗಿದೆ. ಪ್ರಸ್ತುತ ಚಿತ್ರಕ್ಕೆ ಪ್ರಥಮಪ್ರತಿ ಸಿದ್ದವಾಗಿದ್ದು ಸದ್ಯದಲ್ಲೇ ಸೆನ್ಸಾರ್ ಮುಂದೆ ಕಾಣಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಡಾ.ವಿಷ್ಣುವರ್ಧನ್ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದಲ್ಲಿ ಜನಪ್ರಿಯ ನಟ ವಿಜಯರಾಘವೇಂದ್ರ ಕೂಡ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಡಗಿ ನವ್ಯಾನಾಯರ್ ಹಾಗೂ ಲಕ್ಷ್ಮೀಗೋಪಾಲಸ್ವಾಮಿ ನಂಯಜಮಾನ್ರಿಗೆ ನಾಯಕಿಯರಾಗಿದ್ದಾರೆ. ಈಗಾಗಲೇ ಜನಪ್ರಿಯವಾಗಿರುವ ಚಿತ್ರದ ಹಾಡುಗಳನ್ನು ಹಂಸಲೇಖ ಅವರೇ ರಚಿಸಿ ರಾಗಸಂಯೋಜನೆ ಮಾಡಿದ್ದಾರೆ.

ಕರಿಸುಬ್ಬು ಅರ್ಪಿಸಿ ರಾಜಕುಮಾರಿ ರಾಜಶೇಖರ್ ನಿರ್ಮಿಸುತ್ತಿರುವ 'ನಂ ಯಜಮಾನ್ರು' ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ರಮೇಶ್‌ಬಾಬು ಛಾಯಾಗ್ರಹಣ, ಹಂಸಲೇಖ ಗೀತರಚನೆ, ಸಂಗೀತ, ಪೋಕರಿ ಪ್ರಭಾಕರ್, ತುರುವೇಕೆರೆ ಪ್ರಸಾದ್ ಚಿತ್ರಕಥೆ, ಸಂಭಾಷಣೆ, ರಾಮ್‌ಶೆಟ್ಟಿ ಸಾಹಸ, ಎಂ.ಎಸ್.ಮಠ, ಪನ್ನಗಾಭರಣ ಸಹನಿರ್ದೇಶನ, ಚಿನ್ನಿಪ್ರಕಾಶ್, ದೇವ್‌ಸಂಪತ್, ಇಮ್ರಾನ್‌ಸರ್ದಾರಿಯಾ ಹಾಗೂ ತಾರಾ ನೃತ್ಯ ಹಾಗೂ ಸುಂದರರಾಜ್, ಮೋಹನ್ ನಿರ್ಮಾಣನಿರ್ವಹಣೆಯಿದೆ.

ಡಾ.ವಿಷ್ಣುವರ್ಧನ, ವಿಜಯರಾಘವೇಂದ್ರ, ಶರತ್‌ಬಾಬು, ಅನಂತನಾಗ್, ನವ್ಯಾನಾಯರ್, ರಮೇಶ್‌ಭಟ್, ಲಕ್ಷ್ಮೀಗೋಪಾಲಸ್ವಾಮಿ, ಚಿತ್ರಾಶೆಣೈ, ಉಮೇಶ್, ಮೈಕಲ್‌ಮಧು ಚಿತ್ರದ ತಾರಾಬಳಗದಲ್ಲಿ ಇದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada